ಬೆಂಗಳೂರಿನಲ್ಲಿ ಪ್ರಸಿದ್ದ ಗಾಳಿ ಆಂಜನೇಯ ದೇವಸ್ಥಾನಕ್ಕೆ ನುಗ್ಗಿದ ಮಳೆ ನೀರು

ಬೆಂಗಳೂರು;- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ಸುರಿದ ಭಾರೀ ಮಳೆ ಹಿನ್ನಲೆ ಪ್ರಸಿದ್ದ ಗಾಳಿ ಆಂಜನೇಯ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿದೆ. ನೀರು ಹೊರಹಾಕಲು ದೇವಾಲಯದ ಅರ್ಚಕರು ಹಾಗೂ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಮುಂಜಾನೆಯಿಂದಲೆ ಸ್ವಚ್ಚತಾ ಕಾರ್ಯದಲ್ಲಿ ಸಿಬ್ಬಂದಿಗಳು ತೊಡಗಿದ್ದಾರೆ. ಇಂದು ೧೦.೩೦ ಕ್ಕೆ ದೇವಾಲಯಕ್ಕೆ ಭಕ್ತರ ದರ್ಶನಕ್ಕೆ ಅವಕಾಶ ಕೊಡಲಾಗಿದೆ, ನಿತ್ಯ ಬೆಳಿಗ್ಗೆ ೯.೩೦ರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗ್ತಿತ್ತು. ಆದ್ರೆ ಮಳೆ ಅವಾಂತರದಿಂದ ದೇವರ ದರ್ಶನ ಸಮಯ ಬದಲಾವಣೆ ಮಾಡಲಾಗಿದ್ದು, ದೇವರ ದರ್ಶನಕ್ಕೆ ಬಂದಿರುವ ಭಕ್ತರಿಗೆ ನಿರಾಸೆ ಉಂಟಾಗಿದೆ.

Loading

Leave a Reply

Your email address will not be published. Required fields are marked *