ಹುಬ್ಬಳ್ಳಿಯಲ್ಲಿ ನಡೆದ ಉಚಿತ ಸ್ವರ್ಣ ಬಿಂದು ಶಿಬಿರ

ಹುಬ್ಬಳ್ಳಿ; ಮಕ್ಕಳ ಸಮಗ್ರ ಆರೋಗ್ಯವನ್ನು ಪ್ರತಿರಕ್ಷಿಸುವ ಮತ್ತು ಬಲಪಡಿಸುವ ಮಹದುದ್ದೇಶದಿಂದ, ಕರ್ನಾಟಕದ ಮೊದಲ ಪತಂಜಲಿ ವೆಲ್‌ನೆಸ್ ಹುಬ್ಬಳ್ಳಿ ಸಂಸ್ಥೆಯವತಿಯಿಂದ, ಇವರ ಸ್ವಾಸ್ಥ್ಯ ಕೇಂದ್ರ ಮುಕುಂದದಲ್ಲಿ ಉಚಿತ ಸ್ವರ್ಣ ಬಿಂದು ಶಿಬಿರವನ್ನು ಆಯೋಜಿಸಲಾಗಿತ್ತು. ಸ್ವರ್ಣ ಬಿಂದು ಪ್ರಾಶನ ಇದು ಮಕ್ಕಳ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯದೊಂದಿಗೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ಹೆಚ್ಚಿಸಲು ಹುಟ್ಟಿನಿಂದ 14 ವರ್ಷದವರೆಗಿನ ಮಕ್ಕಳಿಗೆ ಪ್ರತಿರಕ್ಷಣೆ ನೀಡುವ ಒಂದು ಆಯುರ್ವೇದ ವಿಧಾನವಾಗಿದೆ.

ವಿಶ್ವಚೇತನ – ಪತಂಜಲಿ ವೆಲ್‌ನೆಸ್ ಹುಬ್ಬಳ್ಳಿ ಈ ಶುಭ ದಿನದಂದು ಈ ಉಚಿತ ರೋಗನಿರೋಧಕ ಶಿಬಿರದ ಮೂಲಕ ಗಮನಾರ್ಹ ವ್ಯವಸ್ಥೆ ಕಲ್ಪಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ತನ್ನದೇ ಆದ ಸೇವೆ ನೀಡುತ್ತಿದೆ. ವಿಶ್ವಚೇತನ ಯೋಗ ಸಂಶೋಧನಾ ಕೇಂದ್ರ ಹುಬ್ಬಳ್ಳಿಯ ಅಧ್ಯಕ್ಷರಾದ ರಮೇಶ ಬಾಫನಾ ಶಿಬಿರವನ್ನು ಉದ್ಘಾಟಿಸಿ ಹುಬ್ಬಳ್ಳಿ ಮತ್ತು ಧಾರವಾಡದಾದ್ಯಂತ 300 ಕ್ಕೂ ಹೆಚ್ಚು ಶಿಶುಗಳು ಮತ್ತು ಮಕ್ಕಳಿಗೆ ಸ್ವರ್ಣಬಿಂದು ಲಸಿಕೆಯ ಪ್ರಯೋಜನವಾಗುವಂತೆ ಮಾಡಿದರು. ವೆಲನೆಸ್ ಕೇಂದ್ರದ ತಂಡದವರು ಅತ್ಯಂತ ಸಕ್ರಿಯವಾಗಿ ಭಾಗವಹಿಸಿ, ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಪೋಷಕರಿಗೆ ಮಕ್ಕಳ ಸಮಗ್ರ ಆರೈಕೆ ಆರೋಗ್ಯ ಉಚಿತ ಸಮಾಲೋಚನೆಯನ್ನು ನೀಡಿದರು.

Loading

Leave a Reply

Your email address will not be published. Required fields are marked *