ಚಿಕ್ಕಬಳ್ಲಾಫುರ: ಶಿಡ್ಲಘಟ್ಟ ನಗರದಲ್ಲಿ ರೇಷ್ಮೆ ಕೃಷಿ ವಸ್ತುಪ್ರದರ್ಶನ ಮತಗಟ್ಟೆ ಗಮನ ಸೆಳೆಯುತ್ತಿದೆ. ಮತದಾನ ಮಾಡಿದವರಿಗೆ ಉಚಿತ ರೇಷ್ಮೆ ಸಸಿ ಪಡೆಯಬಹುದು. ರೇಷ್ಮೆ ಕೃಷಿಯ ಹಂತಗಳು ಸೇರಿದಂತೆ ರೇಷ್ಮೆ ಗೂಡಿನಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ರೇಷ್ಮೆ ಗೂಡಿನಿಂದ ವಿವಿಧ ಅಲಂಕಾರಿಕ ವಸ್ತುಗಳ ತಯಾರಿ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ.
ಚಾಮರಾಜನಗರ: ಯುವತಿಗೆ ರೇಗಿಸುತ್ತಿದ್ದಾನೆಂದು ದುಷ್ಕರ್ಮಿಗಳು ಯುವಕನಿಗೆ ಆರು ಬಾರಿ ಚಾಕು ಇರಿದ ಘಟನೆ ಚಾಮರಾಜನಗರದ ಸೇಂಟ್ ಜೋಸೆಫ್ ಕಾನ್ವೆಂಟ್ ರಸ್ತೆಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ಯುವಕ ಸಂಜಯ್ಕುಮಾರ್ (22)ನನ್ನು ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆ ನಡೆಸಿ ಚಾಕುವಿನಿಂದ ಇರಿಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಯುವತಿಯನ್ನು ರೇಗಿಸುತ್ತಿದ್ದಾನೆಂದು ತಿಳಿದ ಆಕೆಯ ಸ್ನೇಹಿತರಾದ ಅರುಣ್, ಶ್ಯಾಮ್ ಈ ಕೃತ್ಯ ಎಸಗಿದ್ದಾರೆ. ಇಬ್ಬರು ಆರೋಪಿಗಳಾದ ಅರುಣ್, ಶ್ಯಾಮ್ ಅವರನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ. ರಸ್ತೆಯಲ್ಲಿ ವಾಕ್ ಮಾಡುತ್ತಿದ್ದ ಸಂಜಯ್ ಕುಮಾರ್ನನ್ನು ನೋಡಿದ ಕೂಡಲೇ ಯುವತಿ ಕರೆ ಮಾಡಿ ತನ್ನ ಮೂವರು ಸ್ನೇಹಿತರನ್ನು ಕರೆಯಿಸಿದ್ದಾಳೆ. ಬೈಕ್ನಲ್ಲಿ ಬಂದ ಮೂವರು ಏಕಾಎಕಿ ಸಂಜಯ್ ಕುಮಾರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಕುರಿತು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮತ್ತೋರ್ವನಿಗಾಗಿ ಹುಡುಕಾಟ ನಡೆಸಿದ್ದಾರೆ.