ಇಡೀ ಬಿಜೆಪಿ ಕಿತ್ತುಕೊಂಡು ಕಾಂಗ್ರೆಸ್‌ಗೆ ಬರಲು ರೆಡಿಯಾಗಿದೆ – ಸಚಿವ ಈಶ್ವರ ಖಂಡ್ರೆ

ಬೀದರ್;- ಸಚಿವ ಈಶ್ವರ ಖಂಡ್ರೆ ಅವರು ರಮೇಶ್ ಜಾರಕಿಹೊಳಿಗೆ ತಿರುಗೇಟು ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಅವರು ಹಗಲುಕನಸು, ತಿರುಕನ ಕನಸು ಕಾಣುತ್ತಿದ್ದಾರೆ. ಬಿಜೆಪಿಯವರೇ ಕಾಂಗ್ರೆಸ್‌ ಸೇರಲು ಸಾಲಾಗಿ ನಿಂತಿದ್ದಾರೆ ಪರಿಶೀಲನೆ ಮಾಡುತ್ತಿದ್ದಾರೆ, ಒಂದು ವೇಳೆ ಕಮಲಪಾಳಯದವರು ಬಂದಲ್ಲಿ ಇಡೀ ಬಿಜೆಪಿಗೆ ಬಿಜೆಪಿ ಕಿತ್ತುಕೊಂಡು ಬರುತ್ತದೆ ಎಂದರು.

ಅವರಲ್ಲಿ ನೈತಿಕತೆ ಇಲ್ಲ. ಹತಾಶ ಮನೋಭಾವದಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅದಕ್ಕೆ ಯಾರೂ ಕ್ಯಾರೆ ಎನ್ನುತ್ತಿಲ್ಲ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಇನ್ನು ಡಿಕೆ ಶಿವಕುಮಾರ ಅವರು ಪಕ್ಷದ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾಗಿದ್ದು ಎಲ್ಲರಿಗೂ ಒಳ್ಳೆಯ ಆಡಳಿತ ನೀಡುವಂತೆ ಸೂಚನೆ ಕೊಡುತ್ತಿದ್ದಾರೆ ಅತ್ಯುತ್ತಮ ಆಡಳಿತದಿಂದ ಜನರು ಕಾಂಗ್ರೆಸ್‌ ಮೆಚ್ಚಿಕೊಂಡಿದ್ದಾರೆ ಎಂದರು.

Loading

Leave a Reply

Your email address will not be published. Required fields are marked *