ಹಾಸನ: ನಗರದ ಹೊರವಲಯ ಬೊಮ್ಮನಾಯಕನಹಳ್ಳಿ ಬೈಪಾಸ್ ಬಳಿ ಇರುವ ರಾಜೀವ್ ಕಾಲೇಜಿನ ವಿದ್ಯಾರ್ಥಿನಿ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರದಂದು ಮದ್ಯಾಹ್ನ ನಡೆದಿದೆ.ಮದ್ಯಾಹ್ನ ಸುಮಾರು ೧ ಗಂಟೆಯ ಸಮಯದಲ್ಲಿ ನಗರದ ಸಮೀಪ ಇರುವ ರಾಜೀವ್ ತಾಂತ್ರಿಕ ಮಹಾವಿದ್ಯಾಲಯ ಪ್ರಥಮ ವರ್ಷದ ಎಲೆಕ್ಟ್ರಾನಿಕ್ ಅಂಡ್ ಕಮ್ಯೂನಿಕೆಷನ್ ಶಿಕ್ಷಣ ಪಡೆಯುತ್ತಿರುವ ಚನ್ನರಾಯಪಟ್ಟಣ ತಾಲ್ಲೂಕು ದಂಡಿಗನಹಳ್ಳಿ ಹೊನ್ನಶೆಟ್ಟಿಹಳ್ಳಿ ಗ್ರಾಮದ ಗೋಪಾಲ್ ಪುತ್ರಿ ಮಾನ್ಯ 19 ಎಂಬುವರೆ ಆತ್ಮಹತ್ಯೆ ಮಾಡಿಕೊಂಡ ದುರ್ಧೇವಿ.
ಮೊದಲ ವರ್ಷದ ಪರೀಕ್ಷೆ ಬರೆಯುತ್ತಿದ್ದು. ಇಂಟರ್ ಪರೀಕ್ಷೆ ಸಮಯದಲ್ಲಿ ನಕಲು ಮಾಡಿದ ಆರೋಪದ ನಂತರ ಕಾಲೇಜು ಪ್ರಾಂಶುಪಾಲರು ಅಪಾಲಜಿ ಬರೆಯಿಸಿಕೊಳ್ಳಲು ಬರುವಂತೆ ಸೂಚನೆ ನೀಡಿದ್ದು, ಈ ಸಮಯದಲ್ಲಿ ವಿದ್ಯಾರ್ಥಿನಿ ಬೇಸರದಲ್ಲಿ ರಾಜೀವ್ ಕಾಲೇಜು ಕಟ್ಟಡದ ೫ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಕ್ಷಣ ಆಸ್ಪತ್ರೆಗೆ ಸೇರಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರು ಎಳೆದಿದ್ದಾಳೆ. ವಿಚಾರ ತಿಳಿದ ಬಡಾವಣೆ ಪೊಲೀಸ್ ಸಿಬ್ಬಂದಿಗಳು ಬಂದು ಪರಿಶೀಲನೆ ನಡೆಸಿದರು. ಪರೀಕ್ಷೆಯಲ್ಲಿ ಕಾಫಿ ಹೊಡೆಯಲು ಹೋಗಿ ಉಪನ್ಯಾಶಕರಿಗೆ ಸಿಕ್ಕಿಬಿದ್ದ ನಂತರ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.