ಸಣ್ಣ ಕೈಗಾರಿಕೆಗಳು ಉನ್ನತಿ ಹೊಂದುತ್ತಿರುವುದು ದೇಶದ ವಾಣಿಜ್ಯ ಪ್ರಗತಿಯಾಗಿದೆ: ರಾಜನಾಥ್ ಸಿಂಗ್

ಬೆಂಗಳೂರು;- ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರತಿಕ್ರಿಯಿಸಿ, ದೇಶದ ಪ್ರಗತಿಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ವದ್ದು ಎಂದು ಹೇಳಿದ್ದಾರೆ. ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಶೋ 2023 ಉದ್ಘಾಟಿಸಿ ಅವರು ಮಾತನಾಡಿದರು. ಖಾಸಗಿ ಮಾಲೀಕತ್ವದ ಸಣ್ಣ ಕೈಗಾರಿಕೆಗಳು ಉನ್ನತಿ ಹೊಂದುತ್ತಿರುವುದು ದೇಶದ ವಾಣಿಜ್ಯ ಪ್ರಗತಿಯಾಗಿದೆ ಎಂದು ಸಿಂಗ್ ಅಭಿಪ್ರಾಯಪಟ್ಟರು. ಉದಯೋನ್ಮುಖ ಕೈಗಾರಿಕೋದ್ಯಮಿಗಳಿಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಕೈಗಾರಿಕೆಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಲಘು ಉದ್ಯೋಗ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಮೈಸೂರು ಮಹಾರಾಜರ ದೂರದೃಷ್ಟಿಯಿಂದ ಬೆಂಗಳೂರಿನಲ್ಲಿ ಎಚ್‌ಎಎಲ್ ಆರಂಭವಾಯಿತು. ನಷ್ಟದಲ್ಲಿದ್ದ ಎಚ್‌ಎಎಲ್ ಕಾರ್ಖಾನೆ, ಪ್ರಧಾನಿ ಮೋದಿ ಅವರ ಕನಸಿನ ಮೇಕ್ ಇನ್ ಇಂಡಿಯಾ ಯೋಜನೆ ಆರಂಭಗೊಂಡ ನಂತರ ನಷ್ಟದಿಂದ ಮೇಲೆದ್ದು ಆರೋಗ್ಯಕರ ಸ್ಥಿತಿಯಲ್ಲಿ ಮುಂದುವರೆದಿದೆ ಎಂದು ನುಡಿದರು.

Loading

Leave a Reply

Your email address will not be published. Required fields are marked *