ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಿಕಾ ವೈರಸ್ ಪತ್ತೆಯಾಗಿದೆ. ಕೇರಳದಲ್ಲಿ ನಿಫಾ ವೈರಸ್ ಪತ್ತೆಯಾಗಿತ್ತು, ಜಿಕಾ ಬೇರೆ, ನಿಫಾ ಬೇರೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಜಿಕಾ ಬಗ್ಗೆ ಭಯ ಬೇಡ, ಬಾಣಂತಿಯರು ಎಚ್ಚರಿಕೆಯಿಂದ ಇರಬೇಕು. ಸೊಳ್ಳೆಗಳಲ್ಲಿ ಜಿಕಾ ಕಾಣಿಸಿಕೊಂಡಿದೆ,
ಮನುಷ್ಯರಿಗೆ ಪಾಸಿಟಿವ್ ಬಂದಿಲ್ಲ. ಜಿಕಾ ಪತ್ತೆ ಹಿನ್ನೆಲೆ ಆಸ್ಪತ್ರೆಯಲ್ಲಿ ಇದ್ದವರಿಗೆ ಪರೀಕ್ಷೆ ಮಾಡಲಾಗಿದೆ. ಜಿಕಾ ವೈರಸ್ ಲಕ್ಷಣ ಇದ್ದವರ ಸ್ಯಾಂಪಲ್ ಪಡೆಯಲಾಗಿದೆ. ಇನ್ನು 3 ದಿನಗಳಲ್ಲಿ ಟೆಸ್ಟ್ಗೆ ಒಳಪಟ್ಟವರ ವರದಿ ಬರುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು.