PAK vs BAN, ICC World Cup: ವಿಶ್ವಕಪ್ʼನಲ್ಲಿಂದು ಪಾಕಿಸ್ತಾನ-ಬಾಂಗ್ಲಾದೇಶ ಮುಖಾಮುಖಿ

ಸತತ 4  ಪಂದ್ಯಗಳ ಸೋಲಿನೊಂದಿಗೆ ಈಗಾಗಲೇ ಸೆಮಿಫೈನಲ್ ಹಾದಿಯನ್ನು ಬಹುತೇಕ ಭಗ್ನಗೊಳಿಸಿರುವ ಪಾಕಿಸ್ತಾನ ತಂಡ ಮಂಗಳವಾರ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ. ಪಂದ್ಯಕ್ಕೆ ಕೋಲ್ಕತಾ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಸೆಮೀಸ್‌ಗೇರುವ ನೆಚ್ಚಿನ ತಂಡಗಳಲ್ಲಿ ಒಂದಾಗಿ ಟೂರ್ನಿಗೆ ಕಾಲಿರಿಸಿದ್ದ ಪಾಕ್‌ಗೆ ಮೊದಲೆರಡು ಪಂದ್ಯಗಳ ಜಯದ ಬಳಿಕ ಸಾಲು ಸಾಲು ಆಘಾತ ಎದುರಾಗಿದೆ.

ತಂಡಕ್ಕೆ ಬಾಂಗ್ಲಾ ವಿರುದ್ಧದ ಪಂದ್ಯ ಸೇರಿ 3 ಪಂದ್ಯ ಬಾಕಿ ಇದ್ದು, ಎಲ್ಲದರಲ್ಲೂ ಗೆದ್ದರೂ ಗರಿಷ್ಠ 10 ಅಂಕ ಗಳಿಸಬಹುದು. ಆದರೆ ಈಗಾಗಲೇ ಭಾರತ, ದ.ಆಫ್ರಿಕಾ 10ಕ್ಕಿಂತ ಹೆಚ್ಚು ಅಂಕ ಗಳಿಸಿದ್ದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಕೂಡಾ ತಲಾ 8 ಅಂಕದೊಂದಿಗೆ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ.ಹೀಗಾಗಿ ಪಾಕ್ ಉಳಿದೆಲ್ಲಾ ಪಂದ್ಯ ಗೆಲ್ಲುವುದರ ಜೊತೆಗೆ ಇತರ ತಂಡಗಳ ಫಲಿತಾಂಶ ತನ್ನ ಪರವಾಗಿ ಬಂದು, ನೆಟ್ ರನ್‌ರೇಟ್‌ನಲ್ಲಿ ಅವುಗಳನ್ನು ಹಿಂದಿಕ್ಕಿದರೆ ಮಾತ್ರ ಸೆಮೀಸ್‌ಗೇರಬಹುದು.

ಆದರೆ ಅದಕ್ಕೆ ಪವಾಡವೇ ಘಟಿಸಬೇಕಿದೆ. ಮತ್ತೊಂದೆಡೆ ಬಾಂಗ್ಲಾದ ಪರಿಸ್ಥಿತಿ ಪಾಕ್‌ಗಿಂತ ಶೋಚನೀಯ. 6 ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಗೆದ್ದಿದ್ದು, ಕಳೆದ ಐದೂ ಪಂದ್ಯಗಳಲ್ಲಿ ಸತತ ಸೋಲನುಭವಿಸಿದೆ. ಹೀಗಾಗಿ ಹೇಗೆ ಲೆಕ್ಕ ಹಾಕಿದರೂ ತಂಡ ಸೆಮೀಸ್‌ಗೇರುವುದು ಅಸಾಧ್ಯ. ಹೀಗಾಗಿ ನಾಯಕ ಶಕೀಬ್ ಹೇಳಿದಂತೆಯೇ ಇನ್ನುಳಿದ ಪಂದ್ಯಗಳನ್ನು ಗೆದ್ದು, ಪಟ್ಟಿಯಲ್ಲಿ ಅಗ್ರ-8ರಲ್ಲಿ ಸ್ಥಾನ ಪಡೆದು 2025ರ ಚಾಂಪಿಯನ್ಸ್ ಟ್ರೋಫಿಗಾದರೂ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿದೆ.

ಸಂಭವನೀಯ ಆಟಗಾರರ ಪಟ್ಟಿ ಹೀಗಿದೆ:

ಪಾಕಿಸ್ತಾನ ಕ್ರಿಕೆಟ್ ತಂಡ:

ಶಫೀಕ್, ಇಮಾಮ್ ಉಲ್ ಹಕ್/ಫಖರ್ ಜಮಾನ್, ಬಾಬರ್ ಅಜಂ(ನಾಯಕ), ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಶದಾಬ್ ಖಾನ್, ಇಫ್ತಿಕಾರ್ ಅಹಮ್ಮದ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಇಮಾದ್ ವಾಸೀಂ, ಹ್ಯಾರಿಸ್ ರೌಫ್.

ಬಾಂಗ್ಲಾದೇಶ ಕ್ರಿಕೆಟ್ ತಂಡ:

ತಂಜೀದ್ ಹಸನ್, ಲಿಟನ್ ದಾಸ್, ನಜ್ಮುಲ್‌ ಹೊಸೈನ್ ಶಾಂಟೋ, ಶಕೀಬ್ ಅಲ್ ಹಸನ್, ಮುಷ್ಫಿಕುರ್ ರಹೀಂ, ಮೊಹಮದುಲ್ಲಾ, ಮಹಿದಿ ಹಸನ್, ನಸುಮ್ ಅಹಮ್ಮದ್, ಟಸ್ಕಿನ್ ಅಹಮ್ಮದ್, ಮಸ್ತಾಫಿಜುರ್ ರೆಹಮಾನ್, ಶೊರೀಫುಲ್ ಇಸ್ಲಾಂ.

 

 

 

Loading

Leave a Reply

Your email address will not be published. Required fields are marked *