ಹಾವೇರಿ: ಇಂದು ರಾಜ್ಯ ಘಟಕದಿಂದ ಬರ ಅಧ್ಯಯನದ ಸಮೀಕ್ಷೆ ಮಾಡಲಾಗುತ್ತಿದೆ. ಚಿಕ್ಕಣ್ಣ ಎಂಬ ರೈತನ ಹೊಲದಲ್ಲಿ ಸಮೀಕ್ಷೆ ಮಾಡಿದ್ದೇವೆ. ಇಲ್ಲಿ ನೋಡಿದ್ರೆ ಒಂದು ಚೀಲವು ಮೆಕ್ಕೆಜೋಳ ಬರೊಲ್ಲಾ, ನಾವು ಇಂತಹ ಬರಗಾಲ ಯಾವತ್ತೂ ನೋಡಿಲ್ಲಾ ಎಂದು ಬರ ಅಧ್ಯಯನದ ಬಳಿಕ ಮಾಜಿ ಸಚಿವ ಬಿ ಸಿ ಪಾಟೀಲ್ ರಾಣೇಬೆನ್ನೂರು ತಾಲೂಕಿನ ರಾಹುತನಕಟ್ಟಿ ಗ್ರಾಮದಲ್ಲಿ ಪ್ರತಿಕ್ರೀಯೆ ನೀಡಿದ್ದಾರೆ. ಆದರೆ ಇಷ್ಟಿದ್ದರು ಕೂಡಾ ರಾಜ್ಯ ಸರ್ಕಾರ ಇದುವರೆಗೂ ಪರಿಹಾರ ನೀಡಿಲ್ಲಾ.
ನಮ್ಮ ಸರ್ಕಾರ ಇದ್ದಾಗ 28 ಸಾವಿರದಂತೆ ಹಣವನ್ನು ಪ್ರತಿ ಎಕರೆಗೆ ಕೊಟ್ಟಿದ್ದೇವೂ ಆದರೆ ರಾಜ್ಯ ಸರ್ಕಾರ ಗ್ಯಾರಂಟಿ ಈಡೇರಿಸಿದ್ದೇವೆಂದು ಹೇಳಿಕೊಂಡು ತಿರುಗ್ತಾ ಇದಾರೆ. ಸಿಎಂ ಡಿಸಿಎಂ ಹಾಗೂ ಮಂತ್ರಿಗಳು ಪರಿಹಾರ ಕೊಡ್ತಾ ಇದೆವಿ ಎಂದು ಎಲ್ಲೂ ಹೇಳ್ತಾ ಇಲ್ಲಾ. ಪ್ರಾಣಿಗಳಿಂದ ಬೆಳೆ ಹಾನಿಯಾದರೆ ಕೇವಲ ಐದು ಸಾವಿರ ಹಣ ಕೊಟ್ಟಿದಾರೆ. ಕೇಂದ್ರದ ಕಡೆ ಬೊಟ್ಟು ತೋರಿಸದೆ ನಾವೇ ಪರಿಹಾರ ಕೊಟ್ಟಿದ್ವಿ, ಈ ಸರ್ಕಾರ ಬಂದ್ಮೇಲೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಉದ್ಭವ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು
ಅರಣ್ಯ ಇಲಾಖೆಯವರು ಇಲ್ಲಿಯತನಕ ಏನು ಕತ್ತೆ ಕಾಯ್ತಾ ಇದ್ರಾ ಎಂದು ಹುಲಿ ಉಗುರಿನ ವಿಚಾರವಾಗಿ ಕೌರವ ಗರಂ ಆಗಿದ್ದಾರೆ. ಹುಲಿ ಉಗುರು ಹೆಸರು ಹೇಳಿಕೊಂಡು ಬರಗಾಲ ದುಡ್ಡು ಕೊಡ್ತಾ ಇಲ್ಲಾ, 50 ವರ್ಷದ ಕಾಯ್ದೆಯನ್ನು ಈಗ ತಗೊಂಡು ಬಂದಿದ್ದಾರೆ., ಇಲ್ಲಿಯತನಕ ಇವರೇನೂ ಮಲಗಿದ್ರಾ,ಎಲ್ಲರೂ ಹಾಕಿಕೊಂಡಿದ್ದಾರೆ. ಸುಮ್ಮನೆ ಹುಲಿ ಉಗುರು ತೋರಿಸಿಕೊಂಡು ಜನರ ಭಾವನೆಯನ್ನ ಹಾಗೂ ಜನರ ದಿಕ್ಕು ತಪ್ಪಿಸುವ ಕೆಲಸ ರಾಜ್ಯ ಸರ್ಕಾರ ಮಾಡ್ತಾ ಇದೆ ಎಂದು ಹೇಲೀದರು.