ಬೆಂಗಳೂರು: ಕೇರಳದಲ್ಲಿ ನಡೆದ ಬಾಂಬ್ ಸ್ಫೋಟದ ಹಿನ್ನಲೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ಎಚ್ಚರಿಕೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇರಳದ ಘಟನೆ ಹಿನ್ನಲೆಯಲ್ಲಿ ನಾವು ಕೂಟ ಅಲರ್ಟ್ ಆಗಿದ್ದೇವೆ. ನಮ್ಮ ರಾಜ್ಯದಲ್ಲಿ ಅಂತಹ ಯಾವುದೇ ಘಟನೆಗಳು ಆಗದಂತೆ ನೋಡಿಕೊಳ್ತೇವೆ. ಆಗೋದೂ ಕೂಡ ಬೇಡ ಎಂದರು.
ಸಿಎಂ ಜೊತೆ ಭೋಜನಕೂಟಕ್ಕೆ ಅನೇಕ ವ್ಯಾಖ್ಯಾನ ಕೇಳಿಬರುತ್ತಿರುವ ವಿಚಾರವಾಗಿ ಮಾತನಾಡಿ, ಇದನ್ನು ಬಿಜೆಪಿಯ ಕೆಲ ಮುಖಂಡರು ಹೇಳ್ತಿರೋದು. ಹೇಳಿಕೆಗಳನ್ನು ತಿರುಚೋದು, ಒಡೆದ ಬಾಗಿಲು ಅನ್ನೋದು, ಮೂರು ಬಾಗಿಲು ಅನ್ನೋದು ಎಲ್ಲವೂ ಬಿಜೆಪಿಯವರೇ ಎಂದು ತಿರುಗೇಟು ನೀಡಿದರು.