ಗಂಗಾವತಿ;- ಮಾಜಿ ಸಚಿವ ಶ್ರೀರಾಮುಲು ಅವರನ್ನು ರಾಜ್ಯಮಟ್ಟದಲ್ಲಿ ಬೆಳೆಸಿದ್ದೇ ನಾನು ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ, ಅವರು,ವಾಲ್ಮೀಕಿ ಸಮಾಜಕ್ಕೂ ತಮಗೂ ಅವಿನಾಭಾವ ಸಂಬಂಧ ಇದೆ. ಗಂಗಾವತಿ ಕ್ಷೇತ್ರಕ್ಕೆ ಚುನಾವಣೆ ಸ್ಪರ್ಧಿಸುವ ಮುನ್ನ ನನಗೆ ವಾಲ್ಮೀಕಿ ಸಮಾಜದವರೇ ಬೆಂಬಲವಾಗಿ ನಿಂತಿದ್ದರು. ಇದರಿಂದ ನನಗೆ ವಾಲ್ಮೀಕಿ ಸಮಾಜ ಎಂದರೆ ಬಹಳ ಪ್ರೀತಿಯ ಸಮಾಜ ಎಂದರು.
ಇನ್ನು ಬಳ್ಳಾರಿಯ ಶ್ರೀರಾಮುಲು ಹಾಗೂ ಸಿರಗುಪ್ಪದ ಸೋಮಲಿಂಗಪ್ಪ ಅವರನ್ನು ಶಾಸಕರನ್ನಾಗಿ ಮಾಡಿದ್ದೇ ನಾನು ಎಂದ ಜನಾರೆಡ್ಡಿ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ನಾವು ಪರಸ್ಪರ ಸ್ವಲ್ಪ ದೂರ ಉಳಿದಿದ್ದೇವೆಯೇ ಹೊರತು ವಾಲ್ಮೀಕಿ ಸಮಾಜಕ್ಕೆ ನಾನು ಯಾವತ್ತಿಗೂ ಬೆಂಬಲವಾಗಿ ನಿಲ್ಲುತ್ತೇನೆ ಎಂದರು.