ಕೊಡಗು: ಬೆಂಬಲಿಗರ ಬಳಿ ಬೇನಾಮಿ ಆಸ್ತಿ ಇದೆ ಇದರ ಲಾಭಕ್ಕಾಗಿ ಬೆಂಗಳೂರಿಗೆ ಕನಕಪುರವನ್ನ ಸೇರಿಸುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಸಚಿವ ಶ್ರೀರಾಮುಲು ಆರೋಪ ಮಾಡಿದರು. ನಗರದಲ್ಲಿ ಮಾತನಾಡಿದ ಶ್ರೀರಾಮುಲು, ರಾಜಕಾರಣದ ಗಿಮಿಕ್ ಗಾಗಿ ಸ್ವಾರ್ಥಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಬೆಂಬಲಿಗರ ಬಳಿ ಬೇನಾಮಿ ಆಸ್ತಿ ಇರುವ ಕಾರಣ ಇದರ ಲಾಭಕ್ಕಾಗಿ ಬೆಂಗಳೂರಿಗೆ ಕನಕಪುರ ಸೇರಿಸುವುದಾಗಿ ಹೇಳಿದ್ದಾರೆ ಎಂದರು. ಇನ್ನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ತೀರ್ಮಾನ ಮಾಡಿಲ್ಲ. ಮುಂದೆ ದೇವರು ಜನರ ಇಚ್ಛೆಯಂತೆ ನಿರ್ಧಾರ ಮಾಡುತ್ತೇನೆ. ಕರ್ನಾಟಕದಲ್ಲಿ ಹೆಚ್ಚ ಲೋಕಸಭೆ ಕ್ಷೇತ್ರಗಳನ್ನ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.