ಬೆಳ್ಳಂ ಬೆಳಗ್ಗೆ ಭೀಕರ ಅಪಘಾತ: 12 ಮಂದಿ ಸಾವು

ಚಿಕ್ಕಬಳ್ಳಾಪುರ ;– ನಗರದಲ್ಲಿ ಬೆಳ್ಳಂ ಬೆಳಗ್ಗೆ ಬೀಕರ ಅಪಘಾತ ಸಂಭವಿಸಿದೆ. ನಗರದ ಹೊರವಲಯದ ಚಿತ್ರಾವತಿ ಬಳಿಯ ಸಂಚಾರ ಠಾಣೆ ಎದುರು ಬೆಳಿಗ್ಗೆ 7ರ ಸುಮಾರಿನಲ್ಲಿ ನಡೆದ ಭೀಕರ ಅಪಘಾತದಲ್ಲಿ 12 ಮಂದಿ ಮೃತಪಟ್ಟಿದ್ದಾರೆ.
ಟಾಟಾ ಸುಮೊ‌ ಮತ್ತು ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿದೆ. ಒಂದು ಮಗು, ಮೂವರು ಮಹಿಳೆಯರು, ಎಂಟು ಮಂದಿ ಪುರುಷರು ಮೃತರಲ್ಲಿ ಇದ್ದಾರೆ. ಮೃತರೆಲ್ಲ ಕೂಲಿಕಾರರಾಗಿದ್ದು, ಆಂಧ್ರಪ್ರದೇಶದ ಗೊರಂಟ್ಲ, ಪೆನುಗೊಂಡದವರು ಎಂದು ತಿಳಿದುಬಂದಿದೆ. ನಾಲ್ಕು ಜನರ ಸ್ಥಿತಿ ಚಿಂತಾಜನಕವಾಗಿದೆ.
ಇನ್ನೂ ಸ್ಥಳಕ್ಕೆ ಎಸ್ ಪಿ ನಾಗೇಶ್ ವಿವರ ಪಡೆದು ಮಾದ್ಯಮಗಳಿಗೆ ಹೇಳಿಕೆ ಕೊಡದೆ ವಾಪಸ್ಸಾದ್ರು. ನಾಗಾಲ್ಯಾಂಡ್ ರಾಜ್ಯದ ನೊಂದಣೆ ಸಿಮೆಂಟ್ ಟ್ಯಾಂಕರ್ ಗೆ ಹಿಂಬದಿಯಿಂದ ಬಂದು ಟಾಟಾ ಸುಮೋ ಡಿಕ್ಕಿ ಹೊಡೆದಿದೆ.
ಪರಿಣಾಮ, ಟಾಟಾ ಸುಮೋದಲ್ಲಿದ್ದ ಎಲ್ಲರೂ ಬೆಂಗಳೂರಿನವರು ಇರಬಹುದು ಎಂದು ಅಂದಾಜಿಸಲಾಗುತ್ತಿದೆ. ಅಫಘಾತ ಸ್ಥಳದಲ್ಲಿ ಎಲ್ಲ ಟ್ರಾಫಿಕ್ ಜಾಮ್ ಉಂಟಾಗಿದೆ. ಸುಮೋದಲ್ಲಿ ಸಿಕ್ಕಿಹಾಕಿಕೊಂಡಿದ್ದ ಶವಗಳನ್ನು ಡೋರ್ ಗಳು ಕಿತ್ತು ಹೊರತೆಗೆಯಲಾಯಿತು. ೃತಪಟ್ಟ ಎಲ್ಲರನ್ನೂ ನಾಲ್ಕು ಅಂಬುಲೆನಸ್ ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಅಪಘಾತವಾಗಿದ್ದ ಸುಮೋವನ್ನ ಕ್ರೈನ್ ಲ್ಲಿ ಸಾಗಿಸಿ ಪೊಲೀಸರು ರಸ್ತೆ ತೆರವು ಗೊಳಿಸಿದ್ದಾರೆ.

Loading

Leave a Reply

Your email address will not be published. Required fields are marked *