ವಿವಿಧ ದೇಶಗಳ ಜನರು ನಮ್ಮ ವೈವಿಧ್ಯತೆಯನ್ನು ಸವಿದಿದ್ದಾರೆ: ಮೋಹನ್ ಭಾಗವತ್

ಮುಂಬೈ: ಭಾರತವು (India) ಮುಂದುವರಿಯಬೇಕು ಎಂದು ಬಯಸದ ಕೆಲವು ಜನರು ಜಗತ್ತಿನಲ್ಲಿ ಮತ್ತು ಭಾರತದಲ್ಲೂ ಇದ್ದಾರೆ. ಅವರು ಬಣಗಳನ್ನು ಹಾಗೂ ಘರ್ಷಣೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ ಎಂದು ಆರ್‌ಎಸ್‌ಎಸ್‌ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.

ನಾಗ್ಪುರದಲ್ಲಿ ಅವರು ಮಾತನಾಡಿದ್ದಾರೆ. ಈ ವೇಳೆ ನಂಬಿಕೆಯ ಕೊರತೆಯಿಂದಾಗಿ ನಾವು ಕೆಲವೊಮ್ಮೆ ಅಂತಹ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ. ಇದರಿಂದ ಅನಗತ್ಯ ತೊಂದರೆಗಳು ಸೃಷ್ಟಿಯಾಗುತ್ತವೆ. ಭಾರತವು ಪ್ರಗತಿಯಾದರೆ ಅವರು ತಮ್ಮ ಆಟಗಳನ್ನು ಆಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವರು ನಿರಂತರವಾಗಿ ನಿರ್ದಿಷ್ಟ ಸಿದ್ಧಾಂತಗಳನ್ನು ವಿರೋಧಿಸುತ್ತಾರೆ ಎಂದಿದ್ದಾರೆ.

ಅಯೋಧ್ಯೆಯಲ್ಲಿ (Ayodhya) ನಿರ್ಮಾಣವಾಗುತ್ತಿರುವ ರಾಮನ ಮಂದಿರದಲ್ಲಿ ಜನವರಿ 22 ರಂದು ರಾಮನ ವಿಗ್ರಹ ಪ್ರತಿಷ್ಠಾಪನೆಯಾಗಲಿದೆ. ಆ ದಿನ ಇಡೀ ದೇಶದಲ್ಲಿನ ದೇವಸ್ಥಾನಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಈ ಮೂಲಕ ದೇಶದೆಲ್ಲೆಡೆ ಏಕಕಾಲದಲ್ಲಿ ಪೂಜೆ ನಡೆಸಬಹುದು ಎಂದಿದ್ದಾರೆ.

ಪ್ರತಿ ವರ್ಷ ವಿಶ್ವದಲ್ಲಿ ಭಾರತದ ಹೆಮ್ಮೆ ಹೆಚ್ಚುತ್ತಿದೆ. ಭಾರತದಲ್ಲಿ ನಡೆದ ಜಿ20 ಶೃಂಗಸಭೆ ವಿಶೇಷವಾಗಿತ್ತು. ವಿವಿಧ ದೇಶಗಳ ಜನರು ನಮ್ಮ ವೈವಿಧ್ಯತೆಯನ್ನು ಸವಿದಿದ್ದಾರೆ. ಅಲ್ಲದೇ ಭಾರತೀಯರ ಆತಿಥ್ಯವನ್ನು ಶ್ಲಾಘಿಸಿದ್ದಾರೆ. ಅವರು ನಮ್ಮ ರಾಜತಾಂತ್ರಿಕ ಕೌಶಲ್ಯಗಳನ್ನು ಮತ್ತು ನಮ್ಮ ಪ್ರಾಮಾಣಿಕ ಸದ್ಭಾವನೆಯನ್ನು ಕಂಡಿದ್ದಾರೆ. ಕ್ರೀಡೆಯಲ್ಲಿ ಭಾರತ ಸಾಕಷ್ಟು ಸಾಧನೆ ಮಾಡುತ್ತಿದೆ ಎಂದಿದ್ದಾರೆ.

Loading

Leave a Reply

Your email address will not be published. Required fields are marked *