ಪ್ರತಿಯೊಂದು ದೇಶವೂ ಆತ್ಮರಕ್ಷಣೆಯ ಹಕ್ಕನ್ನು ಹೊಂದಿದೆ: ಚೀನಾ

ಬೀಜಿಂಗ್: ಇಸ್ರೇಲ್ (Israel) ಹಾಗೂ ಹಮಾಸ್ (Hamas) ನಡುವಿನ ಯುದ್ಧದ ಬಗೆಗಿನ ನಿಲುವಿನ ಬಗ್ಗೆ ಭಾರೀ ಟೀಕೆಗೆ ಒಳಗಾದ ಚೀನಾ (China) ಇದೀಗ ತನ್ನ ನಿಲುವನ್ನು ಬದಲಿಸಿಕೊಂಡಿದೆ. ಹಮಾಸ್ ದಾಳಿಯ ವಿರುದ್ಧ ಇಸ್ರೇಲ್‌ಗೆ ಆತ್ಮ ರಕ್ಷಣೆಯ ಹಕ್ಕಿದೆ ಎನ್ನುವ ಮೂಲಕ ಚೀನಾ ಉಲ್ಟಾ ಹೊಡೆದಿದೆ.

ಪ್ರತಿಯೊಂದು ದೇಶವೂ ಆತ್ಮರಕ್ಷಣೆಯ ಹಕ್ಕನ್ನು ಹೊಂದಿದೆ. ಆದರೆ ಅಂತಾರಾಷ್ಟ್ರೀಯ ಮಾನವೀಯ ಕಾನೂನಿಗೆ ಅದು ಬದ್ಧವಾಗಿರಬೇಕು ಮತ್ತು ನಾಗರಿಕರನ್ನು ರಕ್ಷಿಸಬೇಕು ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ (Wang Yi) ಹೇಳಿದ್ದಾರೆ.

ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದಿಂದ ಭಯೋತ್ಪಾದಕ ಸಂಘಟನೆ ಎಂದು ಗುರುತಿಸಿಕೊಂಡಿರುವ ಹಮಾಸ್ ದಾಳಿಯ ವಿರುದ್ಧ ಕ್ರಮ ತೆಗೆದುಕೊಳ್ಳುವ ಹಕ್ಕನ್ನು ಇಸ್ರೇಲ್ ಹೊಂದಿದೆ ಎಂದು ಚೀನಾ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಕಳೆದ ವಾರ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಈಜಿಪ್ಟ್ ಹಾಗೂ ಇತರ ಅರಬ್ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಿ ಸಾಧ್ಯವಾದಷ್ಟು ಬೇಗ ಪ್ಯಾಲೆಸ್ತೀನಿಯರ ಸಮಸ್ಯೆಗೆ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಪರಿಹಾರ ನೀಡಲು ಒತ್ತಾಯಿಸಿ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿದ್ದರು.

Loading

Leave a Reply

Your email address will not be published. Required fields are marked *