ತೆರೆಯ ಮೇಲೆ ಯಾವುದೇ ಕಾರಣಕ್ಕೂ ಲಿಪ್ ಲಾಕ್ ಮಾಡಲ್ಲ: ನಟಿ ಶ್ರೀಲೀಲಾ

ಕನ್ನಡದ ನಟಿ ಶ್ರೀಲೀಲಾ ನಟನೆಯ ತೆಲುಗು ಸಿನಿಮಾ ‘ಭಗವಂತ್ ಕೇಸರಿ’ ಬಿಡುಗಡೆ ಆಗಿದೆ. ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಈ ವೇಳೆಯಲ್ಲಿ ನಡೆದ ಸಂದರ್ಶನದಲ್ಲಿ ಶ್ರೀಲೀಲಾ ಅಚ್ಚರಿಯ ಹೇಳಿಕೆಯನ್ನು ಕೊಟ್ಟಿದ್ದಾರೆ. ತೆರೆಯ ಮೇಲೆ ಯಾವುದೇ ಕಾರಣಕ್ಕೂ ತಾವು ಲಿಪ್ ಲಾಕ್ (Lip Lock) ಮಾಡಿಕೊಳ್ಳುವುದಿಲ್ಲವೆಂದಿದ್ದಾರೆ. ಲಿಪ್ ಲಾಕ್ ಮಾಡುವುದೇ ಆದರೆ, ಅವರು ನನ್ನ ಭಾವಿ ಪತಿ ಆಗಿರಬೇಕು ಎಂದೂ ಅವರು ಹೇಳಿಕೆ ನೀಡಿದ್ದಾರೆ. ಈ ವಿಷಯ ತೆಲುಗು ಚಿತ್ರೋದ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಭಗವಂತ್ ಕೇಸರಿ ಸಿನಿಮಾ ಮಾಡಿರುವ ಬೆನ್ನಲ್ಲೇ ಶ್ರೀಲೀಲಾ ಕುರಿತಾಗಿ ಮತ್ತೊಂದು ಸುದ್ದಿಯೂ ಹರಿದಾಡುತ್ತಿದೆ. ಈಗ ತಾನೇ ಟಾಲಿವುಡ್ (Tollywood) ಅಂಗಳದಲ್ಲಿ ನೆಲೆ ಊರುತ್ತಿರುವ ಹುಡುಗಿಯನ್ನು ಮದುವೆ ಮಾಡಿಸಲು ಹೊರಟಿದ್ದಾರೆ ಕೆಲವರು. ಇದೇನಿದು? ಯಾರ ಜೊತೆ ಶ್ರೀಲೀಲಾ ಹೆಸರು ಥಳಕು ಹಾಕಿಕೊಂಡಿತು? ಇಲ್ಲಿದೆ ಮಾಹಿತಿ

ಕನ್ನಡತಿ ಶ್ರೀಲೀಲಾ ಮುಖ ಸಪ್ಪೆ ಮಾಡಿಕೊಂಡಿದ್ದಾರೆ. ಇನ್ಯಾರದ್ದೋ ತಪ್ಪಿಗೆ ಹೀಗೆ ಅವಮಾನ ಅನುಭವಿಸುತ್ತಿದ್ದಾರೆ. ಈಗ ತಾನೇ ಟಾಲಿವುಡ್ ಅಂಗಳದಲ್ಲಿ ಮನೆ ಕಟ್ಟಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿಯೇ ಇವರ ಹೆಸರು ಅದೊಬ್ಬ ಸೂಪರ್‌ಸ್ಟಾರ್ ನಟನ ಮಗನ ಜೊತೆ ಸೇರಿಕೊಂಡಿದೆ. ಅಷ್ಟೇ ಅಲ್ಲ. ಆ ಹುಡುಗನ ಜೊತೆ ಮದುವೆ ಮಾಡಿಕೊಳ್ಳಲು ಸಿದ್ಧತೆ ನಡೆಯುತ್ತಿದೆ ಎಂದು ವೈರಲ್ ಆಗುತ್ತಿದೆ.

ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಭರ್ಜರಿ ಹೆಸರು ಮಾಡುತ್ತಿದ್ದಾರೆ. ಒಂದಲ್ಲ ಎರಡಲ್ಲ ಭರ್ತಿ ಹನ್ನೊಂದು ಸಿನಿಮಾ ಇವರ ಕೈಯಲ್ಲಿವೆ. ಸ್ಟಾರ್ ನಟರಿಂದ ಹಿಡಿದು ಬಡ್ಡಿಂಗ್ ಆರ್ಟಿಸ್ಟ್ ಅಂತಾರಲ್ಲ. ಅವರ ಜೊತೆ ನಟಿಸುತ್ತಿದ್ದಾರೆ. ‘ಭಗವಂತ ಕೇಸರಿ’ (Bhagavantha Kesari) ಸಿನಿಮಾದಲ್ಲಿ ಟಾಲಿವುಡ್ ಟಾಪ್ ಸ್ಟಾರ್ ಬಾಲಕೃಷ್ಣನ ಮಗಳಾಗಿ ನಟಿಸಿದ್ದಾರೆ. ಇದೇ ಬಾಲಯ್ಯನ ಮಗ ಮೋಕ್ಷಗಣನ ಜೊತೆ ಶ್ರೀಲೀಲಾ ಹೆಸರು ಓಡಾಡುತ್ತಿದೆ. ಬರೀ ಅಷ್ಟೆ ಅಲ್ಲ. ಆ ಹುಡುಗನ ಜೊತೆ ಮದುವೆ (Wedding) ಆಗಲಿದ್ದಾರಂತೆ ಕನ್ನಡದ ನಟಿ ಶ್ರೀಲೀಲಾ.

Loading

Leave a Reply

Your email address will not be published. Required fields are marked *