ಗದಗ: ಯಾವುದಾದರೂ ಜಿಲ್ಲೆ ಮಾಡೋದ್ರಿಂದ ಭೂಮಿ ಬೆಲೆ ಏರಿಕೆ ಆಗಲ್ಲ ಎಂದು ರಾಮನಗರ ಜಿಲ್ಲೆ ಬೆಂಗಳೂರಿಗೆ ಸೇರಿಸುವ ವಿಚಾರ ಕುರಿತು ಸಚಿವ ಎಚ್ ಕೆ ಪಾಟೀಲ್ ಪ್ರತಿಕ್ರಿಯೇ ನೀಡಿದ್ದಾರೆ. ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಜಿಲ್ಲೆಯಲ್ಲಿ ಅಭಿವೃದ್ಧಿ ಆಗುತ್ತೆ, ಯಾವ ಜಿಲ್ಲೆಯಲ್ಲಿ ರಚನಾತ್ಮಕ ಕೆಲಸ ಆಗುತ್ತೆ ಅಲ್ಲಿ ಆಸ್ತಿ ಮೌಲ್ಯ ಜಾಸ್ತಿಯಾಗಿ ಆಗ ಸೂಕ್ತವಾದ ಬೆಲೆ ಏರಿಕೆ ಆಗುತ್ತೆ.
ಆದ್ರೆ ಅನಾವಶ್ಯಕ ವಿವಾಧಗಳಿಗೆ ಮಾಧ್ಯಮಗಳು ಪ್ರಚಾರ ಕೊಡ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ಜಿಲ್ಲೆ ಹೆಚ್ಚು ಕಡಿಮೆ ಆಗುವುದರಿಂದ ಬೆಂಗಳೂರು ಸಮೀಪ ದೂರ ವ್ಯಾತ್ಯಾಸವಾಗುತ್ತಾ..? ವಿಷಯ ಬರಲಿ, ಚರ್ಚೆ ಆಗಲಿ ಆಗ ರಿಯಾಕ್ಷನ್ ಮಾಡೋಣ. ಬೇಕಾದ್ರೆ ಸ್ವಾರ್ಥದ ಕಾರಣಗಳು ಏನು ಅಂತ ಡಿಕೆಶಿ, ಎಚ್ ಡಿಕೆ ಅವರನ್ನೇ ಕೇಳಿ ಎಂದು ಸಚಿವ ಎಚ್ ಕೆ ಪಾಟೀಲ್ ಹೇಳಿದರು.