ಮೇ.10 ಮತದಾನ, 224 ವಿಧಾನಸಭಾ ಕ್ಷೇತ್ರಗಳಲ್ಲಿ 58,282 ಮತಗಟ್ಟೆಗಳಿಗೆ ಬಂದೋಬಸ್ತ್

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ನಾಳೆ (ಮೇ.10) ರಂದು ನಡೆಯಲಿದ್ದು, ರಾಜ್ಯಾದ್ಯಂತ ಪೊಲೀಸ್​ ಬಂದೋಬಸ್ತ್​ ಕೈಗೊಳ್ಳಲಾಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 58,282 ಮತಗಟ್ಟೆಗಳಿದ್ದು, ಭದ್ರತೆಗಾಗಿ 1.56 ಲಕ್ಷ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ರಾಜ್ಯದ 84,119 ಪೊಲೀಸರ ಜೊತೆಗೆ ನೆರೆ ರಾಜ್ಯದ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. ಹೊರರಾಜ್ಯದಿಂದ 8,500 ಪೊಲೀಸರು, 650 ಸಿಆರ್​ಪಿಎಫ್​ ತುಕಡಿಯನ್ನು ಕರೆಸಿಕೊಳ್ಳಲಾಗಿದೆ. 304 ಡಿವೈಎಸ್​​ಪಿ, 991 ಇನ್ಸ್​​ಪೆಕ್ಟರ್ಸ್​, 2,610 ಪಿಎಸ್​ಐ, 108 ಬಿಎಸ್​ಎಫ್​, 75 ಸಿಐಎಸ್​​ಎಫ್​, 70 ಐಟಿಬಿಪಿ, 35 ಆರ್​ಫಿಎಫ್​ ಬಂದೋಬಸ್ತಗೆ ನಿಯೋಜಿಸಲಾಗಿದೆ.

ವಿಶೇಷವಾಗಿ 2,930 ಪೊಲೀಸ್ ಮೊಬೈಲ್​ ಸೆಕ್ಟರ್​ಗಳ ಕಾರ್ಯಾಚರಣೆ, ಮೊಬೈಲ್ ಸೆಕ್ಟರ್​ ಮೇಲ್ವಿಚಾರಣೆಗೆ 749 ಸೂಪರ್​ವೈಸರ್​, ರಾಜ್ಯದ ಗಡಿ ಭಾಗದಲ್ಲಿ ವಾಹನಗಳ ತಪಾಸಣೆ ಮಾಡಿ ಬಿಡಲು ಸೂಚನೆ ನೀಡಲಾಗಿದೆ.

Loading

Leave a Reply

Your email address will not be published. Required fields are marked *