ಹಾಸನ: ಕಳೆದ ವಿದಾನಸಭೆ ಚುನಾವಣೆ ಫಲಿತಾಂಶ ನೋಡಿದ್ರೆ ಹಾಸನದಲ್ಲಿ ಕಾಂಗ್ರೆಸ್ ಪಕ್ಷ ಉತ್ತಮವಾಗಿದೆ. ಆದ್ರೆ ಬಿಜೆಪಿಗೆ ಮತ್ತು ಜೆಡಿಎಸ್ ಗೆ ಪರಿಸ್ಥಿತಿ ಕೆಟ್ಟಿದೆ ಎನಿಸುತ್ತಿದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು. ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ಲೋಕಸಭಾ ಕ್ಷೇತ್ರದ ವೀಕ್ಷಕನಾಗಿ ಪಕ್ಷ ನನ್ನನ್ನು ನೇಮಿಸಿದೆ.
ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಈ ಬಾರಿ ಸಂಸತ್ ಸದಸ್ಯರನ್ನು ಗೆಲ್ಲಿಸಬೇಕೆಂದು ಪ್ರಯತ್ನ ಇದೆ. ಆಕಾಂಕ್ಷಿಗಳ ಬಗ್ಗೆ ಮಾಹಿತಿ ಪಡೆಯುತ್ತೇವೆ. ಅಂತಿಮವಾಗಿ ಪಕ್ಷ ಕೈಗೊಳ್ಳೊ ತೀರ್ಮಾನಕ್ಕೆ ಎಲ್ಲರು ಬದ್ದವಾಗಿರುತ್ತೇವೆ ಎಂದರು. ಕಳೆದ ವಿದಾನಸಭೆ ಚುನಾವಣೆ ಫಲಿತಾಂಶ ನೋಡಿದ್ರೆ ಹಾಸನದಲ್ಲಿ ಪಕ್ಷ ಚನ್ನಾಗಿದೆ. ಬಿಜೆಪಿಗೆ ಮತ್ತು ಜೆಡಿಎಸ್ ಗೆ ಪರಿಸ್ಥಿತಿ ಕೆಟ್ಟಿದೆ ಎಂದು ಕಾಣಿಸುತ್ತಿದೆ ಎಂದರು.
ಬಿಜೆಪಿಯಲ್ಲಿ ಹಿಂದೆ ಸರ್ಕಾರ ಇದ್ದಾಗ ಇದೆಲ್ಲ ಇರಲಿಲ್ಲವಾ! ಬೆಳಗಾವಿಯಲ್ಲಿ ಏನೂ ಸಮಸ್ಯೆ ಇಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ, ಸಮಸ್ಯೆ ಇಲ್ಲಾ. ಚುನಾವಣೆಗೂ ಮುನ್ನ ಎಲ್ಲ ಹೇಳಿದ್ರು ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಒಂದಾಗಲ್ಲ ಅಂತಾ. ಸೀಟು ಹಂಚಿಕೆಯಲ್ಲಿ ಗೊಂದಲ ಆಗುತ್ತೆ ಅಂತಾ, ಅದರೆ ಸೀಟು ಹಂಚಿಕೆಯು ಆಯ್ತು. ಈಗ ನಮ್ಮ ಸರ್ಕಾರವು ಬಂತು. ಸರ್ಕಾರ ಬಂದ ಬಳಿಕ ಸಿಎಂ ಆಯ್ಕೆ ಗೊಂದಲ ಅಂತಾ ಅಂದ್ರು. ಸಿಎಂ ಆಯ್ಕೆಯು ಚನ್ನಾಗಿಯೇ ಅಯ್ತು. ನಾಲ್ಕು ಗ್ಯಾರಂಟಿ ಯೋಜನೆಯು ಜಾರಿಯಾಗಿ ಚನ್ನಾಗಿ ನಡೆಯುತ್ತಿಲ್ವ ಎಂದು ವಿರೋಧಕ್ಕೆ ತಿರುಗೇಟು ನೀಡಿದರು.