ಪ್ರೀಮಿಯಂ ಆವೃತ್ತಿಯ ಜಾವಾ 42 ಮತ್ತು ಯೆಜ್ಡಿ ರೋಡ್ಸ್ಟರ್ ಬೈಕ್ಗಳನ್ನು ಜಾವಾ ಯೆಜ್ಡಿ ಮೋಟರ್ಸೈಕಲ್ಸ್ ಕಂಪನಿಯು ರಿಲೀಸ್ ಮಾಡಿದೆ. ಇದರ ಬೆಲೆಯು ಕ್ರಮವಾಗಿ ₹1.98 ಲಕ್ಷ ಮತ್ತು ₹2.08 ಲಕ್ಷದಿಂದ ಆರಂಭ ಆಗುತ್ತದೆ ಎಂದು ಕಂಪನಿ ಹೇಳಿದೆ. ಜಾವಾ 42 ಬೈಕ್ 294.7ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಮತ್ತು ಯೆಜ್ಡಿ ರೋಡ್ಸ್ಟರ್ 334ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನೂ ಮಾರುತಿ ಸುಜುಕಿ ಇಂಡಿಯಾದ ವಾಹನಗಳ ತಯಾರಿಕೆಯು 2022ರ ಸೆಪ್ಟೆಂಬರ್ಗೆ ಹೋಲಿಸಿದರೆ 2023 ಸೆಪ್ಟೆಂಬರ್ನಲ್ಲಿ ಶೇ 1ರಷ್ಟು ಇಳಿಕೆ ಕಂಡಿದೆ. 2022ರ ಸೆಪ್ಟೆಂಬರ್ನಲ್ಲಿ 1.77 ಲಕ್ಷ ವಾಹನಗಳನ್ನು ಕಂಪನಿ ತಯಾರಿಸಿತ್ತು. ಈ ವರ್ಷದ ಸೆಪ್ಟೆಂಬರ್ನಲ್ಲಿ 1.74 ಲಕ್ಷಕ್ಕೆ ಇಳಿಕೆ ಕಂಡಿದೆ. ಪ್ರಯಾಣಿಕ ಕಾರುಗಳ ತಯಾರಿಕೆಯು ಶೇ 21ರಷ್ಟು ಇಳಿಕೆ ಆಗಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.