ಬೆಂಗಳೂರು: ಮೈಸೂರು ದಸರಾ ಜೊತೆಗೆ ಬೆಂಗಳೂರು ದಸರಾ ಹಬ್ಬಕ್ಕೂ ಭದ್ರತೆ ಹೆಚ್ಚಿದೆ. ಮಂಗಳವಾರ ನಡೆಯುವ ಅದ್ಧೂರಿ ದಸರಾ ರಥಗಳ ಮೆರವಣಿಗೆಗೆ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಆರ್.ಟಿ.ನಗರದ ಮಠದಹಳ್ಳಿ ಮೈದಾನಕ್ಕೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಭದ್ರತೆಗೆ ಬರೋಬ್ಬರಿ 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಹೆಬ್ಬಾಳ, ಡಿ.ಜೆ.ಹಳ್ಳಿ ಸೇರಿ ಹಲವೆಡೆಯಿಂದ ದೇವರ ರಥಗಳು ಬರಲಿವೆ. ಹಲವು ಕಾರ್ಯಕ್ರಮ ಹಿನ್ನೆಲೆಯಲ್ಲೆ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿಲಿದ್ದಾರೆ. ಉತ್ತರ ವಿಭಾಗದ ಡಿಸಿಪಿ ಸೈದುಲ್ಲಾ ಅದಾವತ್ ನೇತೃತ್ವದಲ್ಲಿ ಎಸಿಪಿ, ಪಿಐ, ಪಿಎಸ್ಐಗಳು ಸೇರಿದಂತೆ 2000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ದಸರಾ ಹಬ್ಬದ ಭದ್ರತೆಗೆ 10ಕ್ಕೂ ಹೆಚ್ಚು ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ