ದಾವಣಗೆರೆ: ಡಿಕೆ ಶಿವಕುಮಾರ್ ಪ್ರಕರಣ ಸಂಬಂಧ ಸಿಬಿಐ ತನಿಖೆನಾದರೂ ಮಾಡಲಿ ಅಥವಾ ಖುದ್ದು ಗೃಹಮಂತ್ರಿ ಅಮಿತಾ ಶಾ ತನಿಖೆ ಮಾಡಲಿ ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು. ಸುಪ್ರೀಂ ಕೋರ್ಟ್ ಆರ್ಡರ್ ಸ್ವಾಗತ ಮಾಡುತ್ತೇವೆ. ನಾವು ಹೆದರುವಂತಹ ಅವಶ್ಯಕತೆ ಇಲ್ಲ. ಲೋಕಸಭಾ ಚುನಾವಣೆ ಬಂತು, ಸಾಲು ಸಾಲು ಬಿಜೆಪಿ ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ.
ಇದನ್ನು ನೋಡಿ ಸಹಿಸಲಾರದೇ ಬಿಜೆಪಿ ಮಾಡುತ್ತಿರುವ ಕುತಂತ್ರ ಇದು.ಇನ್ನು ಮುಂದೆ ಕಾಂಗ್ರೆಸ್ನವರ ಮನೆ ಮೇಲೆ ಐಟಿ ದಾಳಿ ನಡೆಯುತ್ತದೆ ಎಂದರು. ಕೆಲವೊಂದು ಶಾಸಕರು ಡಿಕೆ ಶಿವಕುಮಾರ್ ಬೆಳಗಾವಿಗೆ ಬಂದಾಗ ಹೋಗಿಲ್ಲ, ಅದಕ್ಕೆ ಬೇರೆಯದ್ದೇ ಕಾರಣ ಇದೆ. ನಾವು 60 ಜನ ಯುವ ಶಾಸಕರು ಡಿಕೆಶಿಯವರ ಬೆಂಬಲಕ್ಕೆ ಇದ್ದೇವೆ. ನಾವೆಲ್ಲಾ ಎಲ್ಲಾ ರೀತಿಯ ಬೆಂಬಲಕ್ಕೆ ಸಿದ್ದರಿದ್ದೇವೆ. ನೂತನ ಶಾಸಕರೆ ಡಿಕೆಶಿ ಬೆಂಬಲಕ್ಕೆ ಇದ್ದೇವೆ. ಹಿರಿಯ ಶಾಸಕರು ಮತ್ತು ನಮ್ಮ ನಡುವೆ ಅಂತರವಿದೆ. ಅದನ್ನೇಲ್ಲಾ ಕೇಳಲು ಆಗಲ್ಲ ಎಂದು ಶಿವಗಂಗಾ ಬಸವರಾಜ್ ಹೇಳಿದರು.