ಪ್ಯಾಲೆಸ್ತೀನ್’ನಲ್ಲಿ ದುರಂತ ನಡೆಯುತ್ತಿರುವಾಗ ನಾವು ಸುಮ್ಮನಿರಲು ಸಾಧ್ಯವಿಲ್ಲ: ಮೊಹಮ್ಮದ್ ಸಫಾರ್

ಇಸ್ಲಾಮಾಬಾದ್: ನಮ್ಮ ಬಳಿ ಇರುವ ಅಣ್ವಸ್ತ್ರಗಳು ವಿಶ್ವದ ಎಲ್ಲಾ ಮುಸ್ಲಿಂ ಸಮುದಾಯಕ್ಕೆ (Musim Community) ಸೇರಿದ್ದು ಎಂದು ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ನವಾಜ್ ಷರೀಫ್ (Nawaz Sharif) ಅಳಿಯ ಕ್ಯಾ. ಮೊಹಮ್ಮದ್ ಸಫಾರ್ (Captain Muhammad Safdar) ಹೇಳಿದ್ದಾರೆ. ಪೇಶಾವರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ಯಾಲೆಸ್ತೀನ್’ನಲ್ಲಿ (Palestine) ದುರಂತ ನಡೆಯುತ್ತಿರುವಾಗ ನಾವು ಸುಮ್ಮನಿರಲು ಸಾಧ್ಯವಿಲ್ಲ.

ಗಾಜಾದ ಮುಸ್ಲಿಮರಿಗೆ ನಾವು ನಿಮ್ಮೊಂದಿಗಿದ್ದೇವೆ ಎಂದು ಹೇಳಿ ಎಂದು ಜನರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ನಮ್ಮ ಅಣ್ವಸ್ತ್ರಗಳು ಕೇವಲ ಪಾಕಿಸ್ತಾನಕ್ಕೆ ಮಾತ್ರ ಅಲ್ಲ. ಅದು ಎಲ್ಲಾ ಮುಸ್ಲಿಮರಿಗೂ ಸೇರಿದ್ದು, ಅದನ್ನು ಯಾರು ಬೇಕಾದರೂ ಬಳಕೆ ಮಾಡಬಹುದು ಎಚ್ಚರಿಕೆ ನೀಡಿದರು. ನಾವು ತುಳಿತಕ್ಕೊಳಗಾದ ಪ್ಯಾಲೆಸ್ತೀನಿಯರ ಜೊತೆ ಇದ್ದೇವೆ. ನಮ್ಮ ಮೇಲೆ ನಡೆಯುತ್ತಿರುವ ಆಕ್ರಮಣ ತಡೆಯಲು ನಾವು ಜಿಹಾದ್ಗೆ ಸಿದ್ಧವಾಗಬೇಕು.

Loading

Leave a Reply

Your email address will not be published. Required fields are marked *