ಮಳೆ ಕೈ ಕೊಟ್ಟಿದ್ದರಿಂದ ಕಬ್ಬಿಗೆ ಸಂಚಕಾರ ಎದುರಾಗಿದೆ. ತಾಲೂಕಿನಲ್ಲಿ 36 ಸಾವಿರ ಹೆಕ್ಟೇರ್ ಕಬ್ಬು ಬೆಳೆದಿದ್ದಾರೆ. ಆದರೆ ಅದರಲ್ಲಿ 25 ಸಾವಿರ ಹೆಕ್ಟೇರ್ ಕಬ್ಬಿನ ಇಳುವರಿ ಮೇಲೆ ಹೊಡೆತ್ತು ಬಿದ್ದಿದೆ.
ಕಳೆದ ಐದು ತಿಂಗಳಲ್ಲಿ ಆಗಬೇಕಾಗಿದ್ದ ಮಳೆ ಕೈ ಕೊಟ್ಟಿದ್ದರಿಂದ ಕಬ್ಬಿಗೆ ಸಂಚಕಾರ ಎದುರಾಗಿದೆ.
ತಾಲೂಕಿನಲ್ಲಿ 36 ಸಾವಿರ ಹೆಕ್ಟೇರ್ ಕಬ್ಬು ಬೆಳೆದಿದ್ದಾರೆ. ಆದರೆ ಅದರಲ್ಲಿ 25 ಸಾವಿರ ಹೆಕ್ಟೇರ್ ಕಬ್ಬಿನ ಇಳುವರಿ ಮೇಲೆ ಹೊಡೆತ್ತು ಬಿದ್ದಿದೆ.
ಸಾಲ ಮಾಡಿ ನಾಟಿ ಮಾಡಿದ ರೈತಾಪಿ ವರ್ಗಕ್ಕೆ ಈಗ ಸಾಲದ ಹೊರೆ ಎದುರಾಗಿದೆ. ಕಬ್ಬು ನಾಟಿ ಮಾಡುವುದು, ರಾಸಾಯನಿಕ ಗೊಬ್ಬರ, ಕೃಷಿ ಕಾರ್ಮಿಕರ ಸಂಬಳ ಇತ್ಯಾದಿ ಕೃಷಿ ಚಟುವಟಿಕೆಗಳನ್ನು ನಿರ್ವಹಿಸಲು ರೈತಾಪಿ ವರ್ಗ ಸಾಲ ಮಾಡಿ ಬೆವರು ಸುರಿಸಿದ ಕಬ್ಬಿಗೆ ಇಳುವರಿ ಬರೆ ಎಳೆದಂತಾಗಿದೆ
ಮುಂಗಾರು ಹಂಗಾಮುದಲ್ಲಿ ಕೊನೆಯ ದಿನಗಳವರಿಗೂ ಹಂಗಾಮು ಇಲಾಖೆ ಮಾಹಿತಿ ಪ್ರಕಾರ ಮಳೆಯಾಗುತ್ತದೆ ಎಂಬ ಆಶಾಭಾವನೆ ರೈತರಲ್ಲಿಚಿಗುರು ಒಡೆದಿತ್ತು. ಆದರೆ ಮಳೆಗಾಲ ಮುಗಿದು ತಿಂಗಳಾದರೂ ಮಳೆಯಾಗುತ್ತಿಲ್ಲ.
ಬರ ಎದುರಾದ ಬಳಿಕ ಕಬ್ಬಿನ ಬೆಳೆಗೆ ಹಾನಿ ಎದುರಾಗಿದೆ. ನೀರಿನ ಮೂಲಗಳಲ್ಲಿಅಂತರ್ಜಲ ಮಟ್ಟ ಕಡಿಮೆಯಾಗಿದೆ. ಸರಕಾರಗಳು ಎಕರೆಗೆ 25 ಸಾವಿರ ಪರಿಹಾರ ಕೊಡಬೇಕು. ರೈತರನ್ನು ಉಳಿಸುವ ಮಾತುಗಳನ್ನು ಆಡುವ ಸರಕಾರಗಳು ಬಜೆಟ್ದಲ್ಲಿಹೆಚ್ಚಿನ ಅನುದಾನವಿಡುತ್ತಿಲ್ಲ.