ಈಗಾಗಲೇ ಅವನನ್ನ ಅರೆಸ್ಟ್ ಮಾಡಿ, ಪೋಕ್ಸೋ ಕೇಸ್ ಹಾಕಲಾಗಿದೆ: ಡಾ.ಜಿ ಪರಮೇಶ್ವರ್

ತುಮಕೂರು: ತುಮಕೂರಿನಲ್ಲಿ ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ವಿಚಾರ ‘ಈಗಾಗಲೇ ಅವನನ್ನ ಅರೆಸ್ಟ್ ಮಾಡಿ , ಪೋಕ್ಸೋ ಕೇಸ್ ಹಾಕಲಾಗಿದೆ. ಇನ್ನು ತುಮಕೂರಿನಲ್ಲಿ ಆಟೋಗಳು ಹೆಚ್ಚಾಗಿರುವ ಹಿನ್ನೆಲೆ ಆರ್ಟಿಒ ಆಫೀಸ್ ನಲ್ಲಿ ಆಟೋಗಳ ದಾಖಲೆ ಸಿಗುತ್ತೆ. ಅದನ್ನ ಪೊಲೀಸರು ತಗೊಂಡು ಬೇಕಾದ ಮಾಹಿತಿ ತೆಗೆದುಕೊಳ್ತಾರೆ.

ಕೆಲವೊಂದು ಆಟೋಗಳು ತಾಲೂಕುಗಳಲ್ಲಿ ರಿಜಿಸ್ಟೇಶನ್ ಮಾಡಿಸಿರ್ತಾರೆ. ತುಮಕೂರಿಗೆ ಪ್ಯಾಸೆಂಜರ್ ಬಾಡಿಗೆ ಬಂದಾಗ ಆ ದಿನ ತುಮಕೂರಿನಲ್ಲಿಯೇ ಬಾಡಿಗೆ ಹೊಡೆತಾರೆ. ಈಗಾಗಲೇ ಡಿಸಿ ಅವರು ಗಮನಹರಿಸಿದ್ದಾರೆ. ಅದನ್ನ ಇನ್ನು ಹೆಚ್ಚಿನ ಪರಿಣಾಮಕಾರಿಯಾಗಿ ಮಾಡಬೇಕು ಎಂದು ತುಮಕೂರಿನಲ್ಲಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.

Loading

Leave a Reply

Your email address will not be published. Required fields are marked *