ಅಯೋಧ್ಯೆಯ ಹನುಮಾನ್ಗರ್ಹಿ ದೇವಸ್ಥಾನದ ಅರ್ಚಕರು ಶವವಾಗಿ ಪತ್ತೆಯಾಗಿದ್ದಾರೆ. ರಾಮ ಜನ್ಮಭೂಮಿ ಆವರಣದ ಹೈ ಸೆಕ್ಯುರಿಟಿ ವಲಯದ ಕೊಠಡಿಯೊಂದರಲ್ಲಿ ಗುರುವಾರ ಕತ್ತು ಸೀಳಿದ ಸ್ಥಿತಿಯಲ್ಲಿ ಅರ್ಚಕರ ಶವ ಪತ್ತೆಯಾಗಿದೆ. ಯಾರೋ ಪರಿಚಿತರೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ರಾಮ್ ಸಹ್ರೇ ಅವರ ಕೋಣೆಗೆ ಯಾರೋ ಹೊರಗಿನವರು ಪ್ರವೇಶ ಮಾಡಲು ಸಾಧ್ಯವಿಲ್ಲ. ದಾಸ್ ಹನುಮಾನ್ ಗರ್ಹಿ ದೇವಸ್ಥಾನದ ಪಕ್ಕದ ಕೋಣೆಯಲ್ಲಿ ಇಬ್ಬರು ಶಿಷ್ಯರೊಂದಿಗೆ ತಂಗಿದ್ದರು. ಶಂಕಿತರಲ್ಲಿ ಒಬ್ಬನನ್ನು ಪ್ರಶ್ನಿಸಲಾಗುತ್ತಿದ್ದು, ಎರಡನೆಯವನು ಕಾಣೆಯಾಗಿದ್ದಾನೆ ಎನ್ನಲಾಗಿದೆ. ಎರಡನೇ ಶಂಕಿತನ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ರಾಜ್ ಕರಣ್ ನಯ್ಯರ್ ಹೇಳಿದ್ದಾರೆ.