ರಾಯಚೂರು: ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಪೂಜಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಶರಣಪ್ರಕಾಶ್ ಪಾಟೀಲ್ ರಾಜೀನಾಮೆಗೆ K.S.ಈಶ್ವರಪ್ಪ ಆಗ್ರಹಿಸಿದ್ದಾರೆ. ನನ್ನ ಹೆಸರು ಬರೆದಿಟ್ಟು ಯಾರೋ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಕಾಂಗ್ರೆಸ್ ನಾಯಕರು ನನ್ನ ರಾಜೀನಾಮೆಗೆ ಪಟ್ಟು ಹಿಡಿಯಲಿಲ್ಲ.
ನಾನೇ ಪ್ರಧಾನಿ ಮೋದಿ, ಅಮಿತ್ ಶಾಗೆ ಹೇಳಿ ರಾಜೀನಾಮೆ ಕೊಟ್ಟೆ. ತನಿಖೆ ಬಳಿಕ ನಿರ್ದೋಷಿ ಎಂದು ತೀರ್ಮಾನ ಆಯ್ತು. ‘ನಾನು ಸಚಿವ ಶರಣಪ್ರಕಾಶ್ ಪಾಟೀಲ್ ದೋಷಿ ಅಂತಾ ಹೇಳಲ್ಲ, ಅವರ ಹೆಸರು ಬರೆದಿಟ್ಟು ಸತ್ತಿರುವುದರಿಂದ ರಾಜೀನಾಮೆ ಕೊಡಲಿ. ನಿರ್ದೋಷಿಯಾದ ಬಳಿಕ ನಂತರ ಮಂತ್ರಿ ಆಗಲಿ ಎಂದರು