ಬೆಂಗಳೂರು: ಐಟಿ ದಾಳಿಯಲ್ಲಿ ಕೋಟಿ ಕೋಟಿ ಹಣ ಪತ್ತೆ ಬಿಜೆಪಿಯದ್ದು ಎಂದು ಹೇಳುವ ಕಾಂಗ್ರೆಸ್ ಸರ್ಕಾರ, ಸಿಬಿಐ ತನಿಖೆಗೆ ನೀಡಿ ಸಾಚಾತನ ತೋರಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಸಿಎಂ ಡಿವಿ ಸದಾನಂದ ಗೌಡ ಸವಾಲು ಹಾಕಿದರು. ಐಟಿ ದಾಳಿಯಲ್ಲಿ ಸಿಕ್ಕಿದ್ದು ಬಿಜೆಪಿ ದುಡ್ಡು ಎಂದು ಡಿಸಿಎಂ ಹೇಳುತ್ತಿರುವುದು ನಾಚಿಕೆಗೇಡು.
ಹಾಗಾದಲ್ಲಿ ಸಿಬಿಐಗೆ ಹಸ್ತಾಂತರ ಮಾಡಿ ಸಾಚಾತನ ತೋರಿಸಿ ಎಂದು ಆಗ್ರಹಿಸಿದರು. ರಾಜ್ಯದ ಪರಿಸ್ಥಿತಿ ಈ ರೀತಿ ಅಧೋಗತಿಗೆ ಬಂತಲ್ಲ ಎಂಬ ನೋವು ಜನರಿಗೆ ಇದೆ. ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತದಲ್ಲಿ ಇದ್ದರೆ ಅಭಿವೃದ್ಧಿ ಅಸಾಧ್ಯ, ಅದಕ್ಕಾಗಿ ಕಾಂಗ್ರೆಸ್ ಮುಕ್ತ ಆಗಬೇಕು. ಆಸೆ ಆಮಿಷ ತೋರಿಸಿ ಜನರ ದಾರಿ ತಪ್ಪಿಸಿ ಅಧಿಕಾರಕ್ಕೆ ಬಂದಿದೆ. ಇವಾಗ ಹಳೇ ಚಾಳಿ ಮುಂದುವರಿಸಿದೆ ಎಂದು ಆರೋಪಿಸಿದರು.