ಬೆಂಗಳೂರು: ಇತ್ತೀಚೆಗಷ್ಟೇ, ಅನುದಾನಕ್ಕಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಕಾಲಿಗೆ ಬಿದ್ದು ಮನವಿ ಮಾಡಿಕೊಂಡಿದ್ದ ಆರ್ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಇದೀಗ ಸುದ್ದಿಗೋಷ್ಠಿ ನಮ್ಮ ಕ್ಷೇತ್ರದ ಹಣ ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಡಿಸಿಎಂ ಹೇಳಿರುವ ಪ್ರಕಾರ ಅನುದಾನದ ಪಟ್ಟಿ ಕಳುಹಿಸಿ ಕೊಟ್ಟಿದ್ದೇನೆ. ಅವರು ಏನು ಮಾಡುತ್ತರೋ ಗೊತ್ತಿಲ್ಲ. ನಮ್ಮ ಕ್ಷೇತ್ರದ ಹಣ ಬಿಡುವ ಪ್ರಶ್ನೆಯೇ ಇಲ್ಲ. ಇದು ಬೇರೆ ಕ್ಷೇತ್ರಕ್ಕೆ ವರ್ಗಾವಣೆ ಆಗಿರುವ ಹಣ. ಹಣ ಬರುವ ವಿಶ್ವಾಸ ಇದೆ, ಕಾಯುತ್ತೇನೆ ಎಂದರು.
ಆಪರೇಷನ್ ಕಮಲದ ಬಗ್ಗೆ ಡಿಸಿಎಂ ಆರೋಪ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರೇ.. ನೆಮ್ಮದಿಯಾಗಿ ಆಡಳಿತ ಮಾಡಿ, ಜನರಿಗೆ ಸಹಾಯ ಮಾಡಿ. ಒಳ್ಳೆಯ ರೀತಿಯಲ್ಲಿ ಸರ್ಕಾರ ನಡೆಸಿಕೊಂಡು ಹೋಗಿ. ನಮಗೆ ಸರ್ಕಾರ ಬೀಳಿಸುವ ಆಲೋಚನೆ ಇಲ್ಲ. ಆದರೆ ಈಗ ಅವರೇ ಆ ರೀತಿ ದಾರಿ ಮಾಡಿಕೊಂಡಿದ್ದಾರೆ. ಕೈ ಹಾಕಬೇಕು ಅಂತಾ ಹೊರಟರೆ ಮುಂದಿನ ದಿನಗಳಲ್ಲಿ ಆ ಮಾತು ಸತ್ಯ ಆಗುತ್ತದೆ. 17+3 ಮಾಡೋದು ಕಷ್ಟ ಏನಿಲ್ಲ ನಮಗೆ. ದೇವಾನು ದೇವತೆಗಳು ತಥಾಸ್ತು ಅಂದರೆ ನಾವಂತೂ ಸುಮ್ಮನೆ ಇರುವುದಿಲ್ಲ ಎಂದರು.