ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ #ಉತ್ತರಹಳ್ಳಿ ಹಾಗು #ಸುಬ್ರಮಣ್ಯಪುರ ವ್ಯಾಪ್ತಿಯ ಪ್ರಮುಖ ಬಡಾವಣೆಗಳಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ಸಾವಿರಾರು ಯುವಕರು ಹಾಗು ಮಹಿಳಾ ಕಾರ್ಯಕರ್ತರೊಂದಿಗೆ ಬೈಕ್ ರ್ಯಾಲಿಯೊಂದಿಗೆ ಮಾತಯಚನೆ ಮಾಡಲಾಯಿತು.
ಜನ ಪರವಾಗಿರುವ ಬಿಜೆಪಿಗೆ ಈ ಬಾರಿ ಸ್ಪಷ್ಟ ಜನಾದೇಶ ಕೊಡುವ ಮೂಲಕ ಬೆಂಗಳೂರು ಮತ್ತು ಕರ್ನಾಟಕದ ಸರ್ವಾಂಗೀಣ ಪ್ರಗತಿಗೆ ಜನತೆ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಚುನಾವಣಾ ಉಸ್ತುವಾರಿಗಳಾದ ಧರ್ಮೆಂದ್ರ ಪಂಚಾಲ್,ಮಾಜಿ ಬಿಬಿಎಂಪಿ ಸದಸ್ಯರಾದ ಎಂ. ಹನುಮಂತಯ್ಯ,
ಕೆ. ರಮೇಶ್ ರಾಜು, ಮುಖಂಡರಾದ ವಿಜಯ್ ಕುಮಾರ್,ಗಂಗಣ್ಣ, ವರಪ್ರಸಾದ್ ರೆಡ್ಡಿ,ರಘುನಾಥ್,ಮಂಡಲ ಅಧ್ಯಕ್ಷ ಕೇಶವ್ ರಾಜ್, ಬಿಜೆಪಿ ಪದಾಧಿಕಾರಿಗಳು,ಸ್ಥಳೀಯ ಹಿರಿಯ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರೊಂದಿಗೆ ವಾರ್ಡಿನ ಪ್ರಮುಖ ಬಡಾವಣೆಗಳಿಗೆ ಈ ಬೃಹತ್ ರೋಡ್ ಶೋ ರ್‍ಯಾಲಿಯಲ್ಲಿ ಭಾವಹಿಸಿದ್ದರು.