ಬೆಂಗಳೂರು: ರಾಜ್ಯದಲ್ಲಿ ಕಲೆಕ್ಷನ್ಗಾಗಿ ಎಐಸಿಸಿ ಟಾರ್ಗಟ್ ನೀಡಿದೆ ಎಂಬ ಬಿಜೆಪಿ ಆರೋಪವನ್ನು ಒಪ್ಪಲು ನಾನು ತಯಾರಿಲ್ಲ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಿದರು. ರಾಜ್ಯದಲ್ಲಿ ಹಣದ ಕಲೆಕ್ಷನ್ಗಾಗಿ ಎಐಸಿಸಿ ಟಾರ್ಗೆಟ್ ಕೊಟ್ಟಿದ್ದಾರೆ ಎಂದು ಒಪ್ಪಲು ತಯಾರಿಲ್ಲ.
ಭ್ರಷ್ಟಾಚಾರವನ್ನು ಯಾವುದೇ ರೀತಿಯಲ್ಲಿ ನಾವು ಸಹಿಸಲ್ಲ ಎಂದು ಎರಡು ತಿಂಗಳ ಹಿಂದೆಯಷ್ಟೇ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟ ನಿರ್ದೇಶನ ಕೊಟ್ಟಿದೆ ಎಂದರು. ಐಟಿ ದಾಳಿಯಲ್ಲಿ ಸಿಕ್ಕ ಹಣದ ಬಗ್ಗೆ ತನಿಖೆ ಆಗಲಿ. ಚುನಾವಣೆ ಬಂದಾಗ ಕೇಂದ್ರ ತನಿಖಾ ಸಂಸ್ಥೆ ಸಕ್ರಿಯವಾಗಿ ಕೆಲಸ ಮಾಡುತ್ತದೆ. ಚುನಾವಣೆ ಹಿನ್ನೆಲೆಯಲ್ಲೇ ಐಟಿ ದಾಳಿ ಮಾಡಿದ್ದಾರೆ. ಅದರಲ್ಲಿ ಸಂಶಯ ಇಲ್ಲ. ಹಿಮಾಲಯ ಪ್ರದೇಶದ ಮಾಜಿ ಸಿಎಂ ಮಗಳ ಮದುವೆ ಮಂಟಪಕ್ಕೂ ಐಟಿ ದಾಳಿ ನಡೆಸಲಾಗಿತ್ತು ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು