ರಾಯಚೂರು: ಜಮೀನು ವಿವಾದ (Land Dispute) ಹಿನ್ನೆಲೆ ಹಳೇ ವೈಷಮ್ಯಕ್ಕೆ ದೂರದ ಸಂಬಂಧಿಕರೇ 9 ಎಕರೆಯಲ್ಲಿ ಬೆಳೆದಿದ್ದ ಹತ್ತಿ ಬೆಳೆಯನ್ನು (Cotton Crop) ಟ್ರ‍್ಯಾಕ್ಟರ್‌ನಿಂದ (Tractor) ನಾಶ ಮಾಡಿರುವ ಘಟನೆ ರಾಯಚೂರಿನ (Raichur) ಮಾನ್ವಿ (Manvi) ತಾಲೂಕಿನ ಕುರಡಿ ಗ್ರಾಮದಲ್ಲಿ ನಡೆದಿದೆ.
ನಾಲ್ಕು ತಿಂಗಳ ಬೆಳೆಯನ್ನು ಎಲ್ಲರೆದುರೆ ಸಂಪೂರ್ಣವಾಗಿ ನಾಶಮಾಡಲಾಗಿದೆ. ನರಸಿಂಹ ಹಾಗೂ ಹುಲಿಗೆಪ್ಪ ಕುಟುಂಬ ಉಳುಮೆ ಮಾಡುತ್ತಿದ್ದರು. ಜಮೀನಿನಲ್ಲಿದ್ದ ಹತ್ತಿ ಬೆಳೆಯನ್ನು ಅಬ್ರಾಹಂಪ್ಪ, ಮಾರೆಪ್ಪ, ಪ್ರಭಾಕರ್ ಸೇರಿ ಹಲವರು ನಾಶ ಮಾಡಿದ್ದಾರೆ ಅಂತ ರೈತರು (Farmers) ಆರೋಪಿಸಿದ್ದಾರೆ. ಮಳೆ ಕೊರತೆಯ ನಡುವೆಯೂ ಉತ್ತಮ ಫಸಲು ಬಂದಿತ್ತು. ಹತ್ತಿ ಗಿಡಗಳು ಕಾಯಿಕಟ್ಟಿದ್ದವು. ಆದರೆ ಹತ್ತಿ ಬೆಳೆ ಕೈಗೆ ಸಿಗುವ ಮೊದಲೇ ಸಂಪೂರ್ಣ ನಾಶಮಾಡಿದ್ದಾರೆ.
ಘಟನೆ ಹಿನ್ನೆಲೆ 28 ಜನರ ವಿರುದ್ಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಕರೆಗೆ 25 ರಿಂದ 30 ಸಾವಿರ ರೂ. ಖರ್ಚು ಮಾಡಲಾಗಿತ್ತು. ಕೆಲವೇ ದಿನಗಳಲ್ಲಿ ಲಕ್ಷಾಂತರ ರೂ. ಬೆಳೆ ಕೈಗೆ ಸೇರುವುದಿತ್ತು. ಬೆಳೆ ನಷ್ಟವಾಗಿರುವುದರಿಂದ ನಮಗೆ ನ್ಯಾಯ ಸಿಗಬೇಕು ಅಂತ ಉಳುಮೆ ಮಾಡಿದ್ದ ರೈತರು ಆಗ್ರಹಿಸಿದ್ದಾರೆ