ರಿಝ್ವಾನ್ – ಶಫಿಕ್ ಬ್ಯಾಟಿಂಗ್ʼಗೆ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಮೆಚ್ಚುಗೆ

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ ಮೊಹಮ್ಮದ್ ರಿಝ್ವಾನ್ ಹಾಗೂ ಅಬ್ದುಲ್ ಶಫಿಕ್ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್, ನಾಯಕ ಬಾಬರ್ ಆಝಮ್ ಅವರ ಪ್ರದರ್ಶನವನ್ನು ಪಾಕಿಸ್ತಾನ ತಂಡ ಹೆಚ್ಚು ಅವಲಂಬಿಸಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಂಗಳವಾರ (ಅ.10) ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 345 ರನ್ ಗುರಿ ಹಿಂಬಾಲಿಸಿದ ಪಾಕಿಸ್ತಾನ, ಆರಂಭದಲ್ಲೇ 37 ರನ್ಗಳಿಗೆ ಎರಡು ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಮೂರನೇ ವಿಕಕೆಟ್ಗೆ ಜೊತೆಯಾದ ಅಬ್ದುಲ್ ಶಫಿಕ್ (113 ರನ್) ಹಾಗೂ ಮೊಹಮ್ಮದ್ ರಿಝ್ವಾನ್ (131 ರನ್) 176 ರನ್ಗಳ ಜೊತೆಯಾಟವಾಡಿದರು. ಆ ಮೂಲಕ 345 ರನ್ಗಳ ದಾಖಲೆಯ ಚೇಸ್ ಮಾಡಲು ಈ ಜೋಡಿ ನೆರವಾಗಿತ್ತು
ಅಫಘಾನಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿರುವ ಪಾಕಿಸ್ತಾನ ತಂಡ ಅಕ್ಟೋಬರ್ 14 ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ತಂಡದ ವಿರುದ್ಧ ಸೆಣಸಲಿದೆ.
ರಿಝ್ವಾನ್ – ಶಫಿಕ್ ಬ್ಯಾಟಿಂಗ್ಗೆ ಸುನೀಲ್ ಗವಾಸ್ಕರ್ ಮೆಚ್ಚುಗೆ

ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್, ಪಾಕಿಸ್ತಾನ ತಂಡದ ಮೊಹಮ್ಮದ್ ರಿಝ್ವಾನ್ ಹಾಗೂ ಅಬ್ದುಲ್ ಶಫಿಕ್ ಅವರನ್ನು ಶ್ಲಾಘಿಸಿದರು ಹಾಗೂ ಪಾಕ್ನ ಪ್ರದರ್ಶನವನ್ನು ನೋಡಿದರೆ, ಈ ತಂಡ ನಾಯಕ ಬಾಬರ್ ಆಝಮ್ ಪ್ರದರ್ಶನವನ್ನು ಹೆಚ್ಚು ಅವಲಂಬಿಸಿಲ್ಲ ಎಂಬುದು ತಿಳಿದುಬರುತ್ತದೆ ಎಂದಿದ್ದಾರೆ

Loading

Leave a Reply

Your email address will not be published. Required fields are marked *