ಬೆಂಗಳೂರು: ಐಟಿ ದಾಳಿ ಕುರಿತು ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ ಬಿಜೆಪಿಯವರು ಆರೋಪ ಮಾಡಿದ್ರೆ ಮಾಡಬಹುದು ಐಟಿ ದಾಳಿಗೂ, ಸರ್ಕಾರಕ್ಕೂ ಏನು ಸಂಬಂಧ ಬಿಜೆಪಿ ಸರ್ಕಾರ ಬಂದ ಮೇಲೆ 500 ರೈಡ್ ಆಗಿದೆ ಅದಕ್ಕೂ ಕಾಂಗ್ರೆಸ್ ಸಂಬಂಧ ಇಲ್ಲ ಎಂದು ಹೇಳಿದರು.ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಐಟಿ ಡಿಪಾರ್ಟ್ಮೆಂಟ್ ಇದೆ,
ರೈಡ್ ಆದೋವ್ರು ಇದಾರೆ ಅವರವರ ಮಧ್ಯೆವಿರುವ ವ್ಯವಸ್ಥೆ ಅದು ಅದನ್ನ ನಮಗೆ ಕನೆಕ್ಟ್ ಮಾಡೋಕೆ ಆಗುತ್ತಾ..? ಯಾರ ಮನೆ ಮೇಲೆ ರೈಡ್ ಆಗಿದೆ, ಗುತ್ತಿಗರದಾರರಾ ಅವರು..? ಗುತ್ತಿಗೆದಾರರ ಮೇಲೆ ಆಗಿರಬಗುದು ಸಾಕಷ್ಟು ಜನ ಗುತ್ತಿಗೆದಾರರು ಎಕೋ ಫ್ರೆಂಡ್ಲಿ ಇರ್ತಾರೆ ಎಲ್ಲಾ ಪಕ್ಷಗಳ ಜೊತೆ ಗುತ್ತಿಗೆದಾರರು ಚೆನ್ನಾಗಿ ಇರ್ತಾರೆ ಅದಕ್ಕೂ ನಮಗೂ ಸಂಬಂಧ ಇಲ್ಲ ಡಿಪಾರ್ಟ್ಮೆಂಟ್ ಹಾಗೂ ಅವರ ಮಧ್ಯೆ ಇರುವ ವಿಚಾರ ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ ರೈಡ್ ಆದ ತಕ್ಷಣ ಆ ಪಕ್ಷ ಈ ಪಕ್ಷ ಅನ್ನೋದಕ್ಕೆ ಆಗುತ್ತಾ ಎಂದು ಪ್ರಶ್ನೆ ಮಾಡಿದರು.
ಹಾಗೆ ಎಲ್ಲದಕ್ಕೂ ರಾಜಕೀಯ ಕಲ್ಪಿಸೋದಕ್ಕೆ ಆಗಲ್ಲ ಕೆಲವೊಂದು ಸಲ ಸ್ವಾಭಾವಿಕ ವಾಗಿ ರೈಡ್ ನಡೆದಿರುತ್ತೆ, ಕೆಲವೊಂದು ಆರೋಪ ಬಂದಿರುತ್ತೆ ಆಗ ರೈಡ್ ಆಗುತ್ತೆ ಕೆಲವು ಬಾರಿ ಐಟಿ ನೋಟೀಸ್ ಕೊಟ್ಟಿರುತ್ತೆ ಅದಕ್ಕೆ ಗುತ್ತಿಗೆದಾರರು ಉತ್ತರ ಕೊಟ್ಟಿರಲ್ಲ ಡೀಟೇಲ್ಸ್ ಆಗಿ ಹೋದಾಗಲೇ ಗೊತ್ತಾಗೋದು ಎಂದು ಹೇಳಿದರು.