ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಟೋರಿ ಬೋವಿ ಅನುಮಾನಾಸ್ಪದ ಸಾವು

ವಾಷಿಂಗ್ಟನ್‌: 2016ರ ಒಲಿಂಪಿಕ್ಸ್‌ ಕ್ರೀಡೆಯಲ್ಲಿ ಮೂರು ಪದಕ ಹಾಗೂ ಎರಡು ಬಾರಿ ವಿಶ್ವಚಾಂಪಿಯನ್‌ ಶಿಪ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ಟೋರಿ ಬೋವಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.

ಹಲವು ದಿನಗಳ ಹಿಂದೆ ಆರೋಗ್ಯ ತಪಾಸಣೆಗಾಗಿ ತೆರಳಿದ್ದ ಬೋವಿ ಫ್ಲೋರಿಡಾದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ಆದರೂ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ತನಿಖೆ ನಡೆಸಲು ಹಿಂದೇಟು ಹಾಕಿದೆ ಎಂಬ ಆರೋಪಗಳು ಕೇಳಿಬಂದಿದೆ.

ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಟ್ವೀಟ್‌ ಮೂಲಕ ಬೋವಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಟೋರಿ ಬೋವಿ ಹಠಾತ್‌ ನಿಧನವು ಆಘಾತ ತಂದಿದೆ. ಅವರ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುವುದಾಗಿ ಬರೆದುಕೊಂಡಿದ್ದಾರೆ.

ಟೋರಿ 2016ರ ಒಲಿಂಪಿಕ್ಸ್‌ನಲ್ಲಿ ಮೂರು ಪದಗಳನ್ನು ಗೆದ್ದುಕೊಂಡಿದ್ದರು. ಕೊನೆಯದ್ದಾಗಿ 2022ರಲ್ಲಿ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಇದೀಗ ಬೋವಿಯ ಅನುಮಾನಾಸ್ಪದ ಸಾವು ಕ್ರಿಡಾ ಅಭಿಮಾನಿಗಳಿಗೆ ಸಾಕಷ್ಟು ಅಘಾತ ನೀಡಿದೆ.

Loading

Leave a Reply

Your email address will not be published. Required fields are marked *