ಛತ್ತೀಸ್ಗಢ: ಪಂಜಾಬ್‍ನ (Punjab) ಸ್ವರ್ಣಮಂದಿರದ (Golden Temple) ಬಳಿಯ ಹೆರಿಟೇಜ್ ಸ್ಟ್ರೀಟ್‍ನಲ್ಲಿ (Heritage Street) ಸೋಮವಾರ ಬೆಳಗ್ಗೆ ಸ್ಫೋಟ ಸಂಭವಿಸಿದ ಘಟನೆ ನಡೆದಿದೆ.
ಕಳೆದ 3 ದಿನಗಳಲ್ಲಿ ಸ್ವರ್ಣ ಮಂದಿರದ ಬಳಿಯಲ್ಲಿ ನಡೆದ 2ನೇ ಸ್ಫೋಟ ಇದಾಗಿದೆ. ಮೇ 6ರಂದು ಸ್ಫೋಟ ಸಂಭವಿಸಿದ ಸ್ಥಳದ ಸಮೀಪವಿರುವ ಹೆರಿಟೇಜ್ ಸ್ಟ್ರೀಟ್‍ನಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲ.
ಜೊತೆಗೆ ಯಾವುದಕ್ಕೂ ಹಾನಿ ಸಂಭವಿಸಿಲ್ಲ. ಸ್ಫೋಟಕ್ಕೆ ಇನ್ನೂ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ತಕ್ಷಣವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಇನ್ನೂ ಘಟನೆಯ ಕುರಿತು ಎರಡು ಸ್ಫೋಟಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಶನಿವಾರ ನಡೆದಿದ್ದ ಸ್ಫೋಟದಲ್ಲಿ ಒಬ್ಬರು ಗಾಯಗೊಂಡಿದ್ದಾರೆ ಮತ್ತು ಕೆಲವು ಕಟ್ಟಡಗಳ ಗಾಜಿನ ಮುಂಭಾಗಗಳು ಹಾನಿಗೊಳಗಾಗಿವೆ.