ಕರ್ನಾಟಕ ಫಾರೆಸ್ಟ್ ಡಿಪಾರ್ಟ್ಮೆಂಟ್ ಮೈಸೂರು ಅರಣ್ಯ ವೃತ್ತದಲ್ಲಿ 32 ಅರಣ್ಯ ವೀಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ ಅಭ್ಯರ್ಥಿಗಳನ್ನು ಅವರ ಎಸ್ಎಸ್ಎಲ್ಸಿ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಇವರಿಗೆ ಪಿಎಸ್ಟಿ, ಪಿಇಟಿ, ವೈದ್ಯಕೀಯ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ನೇಮಕಾತಿಅರಣ್ಯವೃತ್ತ: ಮೈಸೂರುಅರಣ್ಯವೃತ್ತ
ಹುದ್ದೆಹೆಸರು : ಅರಣ್ಯವೀಕ್ಷಕ
ಹುದ್ದೆಗಳಸಂಖ್ಯೆ : 32
ಶೈಕ್ಷಣಿಕಅರ್ಹತೆ : ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆ ಉತ್ತೀರ್ಣ.
ವಯಸ್ಸಿನಅರ್ಹತೆಕನಿಷ್ಠ 18 ವರ್ಷ ಆಗಿರಬೇಕು.
ಸಾಮಾನ್ಯ ಅರ್ಹತೆಯವರಿಗೆ 30 ವರ್ಷ ಗರಿಷ್ಠ ವಯೋಮಿತಿ.
ಇತರೆ ಹಿಂದುಳಿದ ವರ್ಗದವರಿಗೆ 32 ವರ್ಷ ಗರಿಷ್ಠ ವಯೋಮಿತಿ.
ಎಸ್ಸಿ /ಎಸ್ಟಿ ಅಭ್ಯರ್ಥಿಗಳಿಗೆ 33 ವರ್ಷ ಗರಿಷ್ಠ ವಯೋಮಿತಿ.
ಫಾರೆಸ್ಟ್ ವಾಚರ್ ಹುದ್ದೆಗೆ ವೃತ್ತಿ ಬುನಾದಿ ತರಬೇತಿ ಅವಧಿ 6 ತಿಂಗಳು.
ಪರೀಕ್ಷಾರ್ಥ ಅವಧಿ (ತರಬೇತಿ ಅವಧಿ ಸೇರಿ) – 36 ತಿಂಗಳು.
ಅರ್ಜಿಸಲ್ಲಿಸುವವಿಧಾನ
– ವೆಬ್ಸೈಟ್ https://kfdrecruitment.in/ ಗೆ ಭೇಟಿ ನೀಡಿ.
– ಅರಣ್ಯ ವೀಕ್ಷಕ ಹುದ್ದೆಗಳ ಆನ್ಲೈನ್ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
– ನಂತರ ಮತ್ತೊಂದು ವೆಬ್ಪುಟ ತೆರೆಯುತ್ತದೆ.
– ಇಲ್ಲಿ ಕೇಳಲಾದ ಅಗತ್ಯ ವಿವರಗಳನ್ನು ಟೈಪಿಸಿ.
– ಮೊದಲಿಗೆ ನೀವು ಯಾವ ಅರಣ್ಯ ವೃತ್ತಕ್ಕೆ ಅರ್ಜಿ ಎಂಬುದನ್ನು ಸೆಲೆಕ್ಟ್ ಮಾಡಬೇಕು.
– ನಂತರ ಹೆಸರು, ತಂದೆ/ತಾಯಿ ಹೆಸರು, ಆಧಾರ್, ಇ-ಮೇಲ್, ಮೊಬೈಲ್ ನಂಬರ್ ಕೇಳಲಾಗುತ್ತದೆ. ತಪ್ಪಾಗದಂತೆ ಈ ಮಾಹಿತಿಗಳನ್ನು ನೀಡಿ.
– ‘Submit’ ಎಂದಿರುವಲ್ಲಿ ಕ್ಲಿಕ್ ಮಾಡಿ. ರಿಜಿಸ್ಟ್ರೇಷನ್ ಐಡಿ ಮತ್ತು ಪಾಸ್ವರ್ಡ್ ಕ್ರಿಯೇಟ್ ಆಗುತ್ತದೆ.
– ನಂತರ ಮತ್ತೆ ಲಾಗಿನ್ ಆಗುವ ಮೂಲಕ ಕೇಳಲಾದ ಇತರೆ ಮಾಹಿತಿಗಳನ್ನು ನೀಡಿ ಅರ್ಜಿ ಪೂರ್ಣಗೊಳಿಸಿ.
– ಅರ್ಜಿ ಶುಲ್ಕ ಪಾವತಿಗೆ ಚಲನ್ ಜೆನೆರೇಟ್ ಮಾಡಿಕೊಂಡು, ಪಾವತಿಸಿ.
ಅರ್ಜಿ ಶುಲ್ಕ ರೂ.200.
ಎಸ್ಸಿ/ ಎಸ್ಟಿ/ ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.100.
ಹುದ್ದೆಯ ಹೆಸರು ಅರಣ್ಯ ವೀಕ್ಷಕರ ನೇಮಕ
ವಿವರ ಅರಣ್ಯ ಇಲಾಖೆ ಅಧಿಸೂಚನೆ
ಪ್ರಕಟಣೆ ದಿನಾಂಕ 2023-09-29
ಕೊನೆ ದಿನಾಂಕ 2023-10-26
ಉದ್ಯೋಗ ವಿಧ ಪೂರ್ಣಾವಧಿ
ಉದ್ಯೋಗ ಕ್ಷೇತ್ರ ಸರ್ಕಾರಿ ಉದ್ಯೋಗ