ಬಾಂಗ್ಲಾದೇಶ ವಿರುದ್ಧ ಇಂಗ್ಲೆಂಡ್’ಗೆ 137 ರನ್’ಗಳ ಗೆಲುವು

ಧರ್ಮಶಾಲಾ: ಆರಂಭಿಕ ಆಟಗಾರ ಡೇವಿಡ್ ಮಲಾನ್ (Dawid Malan) ಅವರ ಸ್ಫೋಟಕ ಶತಕದ ಆಟದಿಂದ ಬಾಂಗ್ಲಾದೇಶದ (Bangladesh) ವಿರುದ್ಧ ಇಂಗ್ಲೆಂಡ್ (England) 137 ರನ್ಗಳ ಭರ್ಜರಿ ಜಯ ಸಾಧಿಸಿ ವಿಶ್ವಕಪ್ ಟೂರ್ನಿಯಲ್ಲಿ (World Cup Cricket) ಶುಭಾರಂಭ ಮಾಡಿದೆ. ಇಂಗ್ಲೆಂಡ್ ನೀಡಿದ 365 ರನ್ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ 48.2 ಓವರ್ಗಳಲ್ಲಿ 227 ರನ್ಗಳಿಗೆ ಸರ್ವಪತನ ಕಂಡಿತು.

ಬಾಂಗ್ಲಾ ಪರವಾಗಿ ಆರಂಭಿಕ ಆಟಗಾರ ಲಿಟ್ಟನ್ ದಾಸ್ 76 ರನ್ (66 ಎಸೆತ, 7 ಬೌಂಡರಿ, 2 ಸಿಕ್ಸರ್) ಹೊಡೆದರೆ ಮುಷ್ಫಿಕರ್ ರಹೀಂ 51 ರನ್ (64 ಎಸೆತ, 4 ಬೌಂಡರಿ) ತೌಹಿದ್ 39 ರನ್ (61 ಎಸೆತ, 2 ಬೌಂಡರಿ) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು. ರೀಸ್ ಟೋಪ್ಲಿ 4 ವಿಕೆಟ್, ಕ್ರೀಸ್ ವೋಕ್ಸ್ 2 ವಿಕೆಟ್ ಪಡೆದರು. ಸ್ಯಾಮ್ ಕರ್ರನ್, ಮಾರ್ಕ್ ವುಡ್, ಅದಿಲ್ ರಶೀದ್, ಲಿಯಾಮ್ ಲಿವಿಂಗ್ಸ್ಟೋನ್ ತಲಾ ಒಂದೊಂದು ವಿಕೆಟ್ ಪಡೆದರು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಪರವಾಗಿ ಜಾನಿ ಬೈರ್ಸ್ಟೋವ್ ಮತ್ತು ಡೇವಿಡ್ ಮಲಾನ್ ಮೊದಲ ವಿಕೆಟಿಗೆ 107 ಎಸೆತಗಳಲ್ಲಿ 115 ರನ್ ಜೊತೆಯಾಟವಾಡಿದರು. ಜಾನಿ ಬೈರ್ಸ್ಟೋವ್ 52 ರನ್(59 ಎಸೆತ, 8 ಬೌಂಡರಿ ಹೊಡೆದು ಔಟಾದರೆ, ಮಲಾನ್ 140 ರನ್ (107 ಎಸೆತ, 16 ಬೌಂಡರಿ, 5 ಸಿಕ್ಸರ್), ನಾಯಕ ಜೋ ರೂಟ್ 82 ರನ್ (68 ಎಸೆತ, 8 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು. ಅಂತಿಮವಾಗಿ ಇಂಗ್ಲೆಂಡ್ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 364 ರನ್ ಹೊಡೆಯಿತು.

Loading

Leave a Reply

Your email address will not be published. Required fields are marked *