ಮೈಸೂರು: ವಿ.ಸೋಮಣ್ಣಗೆ ಬಿಜೆಪಿಯಲ್ಲಿ ಅಸಮಾಧಾನ ಇರುವುದು ಸತ್ಯ ಎಂದು ಕೆಎಸ್ ಈಶ್ವರಪ್ಪ ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಅವರು ‘ ಸಿಎಂ ಸಿದ್ದರಾಮಯ್ಯರನ್ನು ಸೋಲಿಸುವ ಶಕ್ತಿ ಸೋಮಣ್ಣಗೆ ಇತ್ತು. ಆದರೆ, ಸಿದ್ದರಾಮಯ್ಯ ಹೇಗೆ ಗೆದ್ದರು ಎಂಬುದು ಎಲ್ಲರಿಗೂ ಗೊತ್ತಿದೆ.
ಕೇಂದ್ರ ಬಿಜೆಪಿ ನಾಯಕರು ವಿ.ಸೋಮಣ್ಣರನ್ನು ಕೈ ಬಿಡುವುದಿಲ್ಲ. ಯಾರಿಗೆ, ಯಾವ ಸ್ಥಾನ ನೀಡಬೇಕೆಂದು ಪಕ್ಷ ತೀರ್ಮಾನಿಸುತ್ತದೆ. ಅಧ್ಯಕ್ಷರಿಂದಲೇ ಪಕ್ಷ ಬೆಳೆಯುತ್ತದೆ ಎಂಬುವುದು ತಪ್ಪು ಕಲ್ಪನೆ ಎಂದರು