ಬೆಂಗಳೂರು: ‘ನನ್ನ ಕ್ಷೇತ್ರದ ಜನರಿಗಾಗಿ ನಾನು ಅವರ ಕಾಲು ಬೀಳಲೂ ಸಿದ್ದನಿದ್ದೇನೆ ಎಂದು ಶಾಸಕ ಮುನಿರತ್ನ ಹೇಳಿದರು. ಪ್ರತಿಭಟನೆ ಮುಗಿದ ಕೂಡಲೇ ಬೆಂಗಳೂರು ನಗರಾಭಿವೃದ್ಧಿ ಸಚಿವರು, ಸಂಸದರು ಇಬ್ಬರ ಕಾಲು ಹಿಡಿಯಲು ಸಿದ್ದನಿದ್ದೇನೆ ಎಂದರು. ‘ನನ್ನ ಕೊನೆ ಉಸಿರು ಇರುವರೆಗೂ ನಾನು ಬಿಜೆಪಿಯಲ್ಲೇ ಇರುತ್ತೇನೆ,
ನಾನು ಎಲ್ಲಿಗೂ ಹೋಗಲ್ಲ. ಡಿಸಿಎಂ ರಿಂದಲೇ ಅನುದಾನ ಬೇಕಿರುವುದು. ಬದಲಾವಣೆ ಅನುದಾನ ಕೊಡಿಸಬೇಕಿರುವುದು ಅವರೇ, ನಾನು ಸಿಎಂ ಹತ್ತಿರ ಹೋಗಲ್ಲ, ಡಿಸಿಎಂ ಹತ್ತಿರ ಹೋಗುತ್ತೇನೆ. ಅವರ ಕಾಲನ್ನೇ ನಾನು ಹಿಡಿಯುತ್ತೇನೆ. ಕಾಶ್ಮೀರ ಸಮಸ್ಯೆ ಬಗೆ ಹರಿಯುತ್ತದೆ, ಆದರೆ ನನ್ನ ಕ್ಷೇತ್ರದ ಸಮಸ್ಯೆ ಬಗೆ ಹರಿಯಲ್ಲ ಎಂದು ಹೇಳಿದರು.