ಮಂಡ್ಯ: ಕಾವೇರಿ ನೀರಿನ ವಿಚಾರವಾಗಿ ಕೇಂದ್ರ ಸರ್ಕಾರ ಮಧ್ಯೆಪ್ರವೇಶ ಮಾಡಬೇಕು ಎಂಬ ಆಗ್ರಹ ಕೇಳಿ ಬರುತ್ತಿರುವ ವಿಚಾರವಾಗಿ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ ಕಾವೇರಿ ವಿಚಾರವಾಗಿ ಪ್ರತ್ಯೇಕವಾದ ಎರಡು ಬೋರ್ಡ್ ಇದೆ.
ಇದರಲ್ಲಿ ಸುಪ್ರಿಂ ಕೋರ್ಟ್ ಸಹ ಮಧ್ಯಪ್ರವೇಶ ಮಾಡಲು ಆಗುವುದಿಲ್ಲ. ಅಧಿಕಾರಿಗಳು ಏನು ನಿರ್ಣಯ ಮಾಡುತ್ತಾರೆ ಅದೇ ಅಂತಿಮ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇಂತಹದರಲ್ಲಿ ಯಾರು ಮಧ್ಯ ಪ್ರವೇಶಿಸಬೇಕು. ತಮಿಳುನಾಡು, ಕರ್ನಾಟಕ ನಿರ್ಧಾರ ಮಾಡುವುದು ಅಲ್ಲ ಎಂದು ಹೇಳಿದರು.