ಮೈಸೂರು: ಬಿಜೆಪಿಗೆ ಬರೋವರೆಗೂ ನಾನು ಸೋತೆ ಇರಲಿಲ್ಲ, ಬಿಜೆಪಿಗೆ ಬಂದಾಗಿನಿಂದ ನಾನು ನಾಲ್ಕರಿಂದ ಐದು ಬಾರಿ ಸೋತೆ ಎಂದು ಮೈಸೂರಿನ ಬಸವ ಜಯಂತಿ ಕಾರ್ಯಕ್ರಮದಲ್ಲಿ ವಿ.ಸೋಮಣ್ಣ ಹೇಳಿದರು. ಶ್ರೀನಿವಾಸ್ ಸಾಹೇಬ್ರೆ ನಾನು ಸೋತೆ ಇಲ್ಲ,
ಕಾಂಗ್ರೆಸ್ನಲ್ಲಿ ನಿಂತು ಗೆದ್ದಿದ್ದೇನೆ. ಸ್ವತಂತ್ರ ಅಭ್ಯರ್ಥಿಯಾಗಿ 2 ಬಾರಿ ಗೆದ್ದಿದ್ದೇನೆ . ಬಿಜೆಪಿ ಬಂದು ಸೋತೆ. ನಾನು ಏನಾಗಿಬಿಡ್ತಿನಿ ಅನ್ನೋ ಭಯದಲ್ಲಿ ಸೋಲಿಸಿದ್ರು. ಪರೋಕ್ಷವಾಗಿ ಬಿಜೆಪಿ ನಾಯಕರ ವಿರುದ್ಧ ವಿ.ಸೋಮಣ್ಣ ಕಿಡಿಕಾರಿದರು.