‘ದಿ ಕೇರಳ ಸ್ಟೋರಿ’ ಆತಂಕವಾದದ ಸಿನಿಮಾ: ಪ್ರಧಾನಿ ಮೋದಿ

ಇಂದು ದೇಶದಾದ್ಯಂತ ಸಾಕಷ್ಟು ವಿವಾದ ಹುಟ್ಟುಹಾಕಿರುವ ‘ದಿ ಕೇರಳ ಸ್ಟೋರಿ’ ಸಿನಿಮಾ ರಿಲೀಸ್ ಆಗಿದೆ. ಕಥಾವಸ್ತುವಿನ ಕಾರಣದಿಂದಾಗಿ ವಿವಾದಕ್ಕೀಡಾಗಿರುವ ಚಿತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.

ಬಳ್ಳಾರಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮೋದಿ, ‘ದಿ ಕೇರಳ ಸ್ಟೋರಿ ಆತಂಕವಾದದ ಕಥಾವಸ್ತುವನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ. ಹಲವು ವರ್ಷಗಳಿಂದ ಆತಂಕವಾದದ ಸ್ವರೂಪ ಬದಲಾಗಿದೆ’ ಎಂದಿದ್ದಾರೆ.

‘ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಆತಂಕವಾದದ ಮತ್ತೊಂದು ಮುಖವನ್ನು ಪರಿಚಯಿಸಲಾಗಿದೆ. ಇದು ನೈಜ ಘಟನೆಯನ್ನು ಆಧರಿಸಿದ ಸಿನಿಮಾವಾಗಿದ್ದು, ಕಾಂಗ್ರೆಸ್ ಪಕ್ಷ ಈ ಕುರಿತು ಮಾತನಾಡದೇ ಸಿನಿಮಾವನ್ನು ನಿಷೇಧ ಮಾಡಬೇಕು ಎಂದು ಆತಂಕವಾದದ ಪರವಾಗಿಯೇ ಮಾತನಾಡುತ್ತಿದೆ’ ಎಂದರು. ಅಲ್ಲದೆ ಕೇರಳ ರಾಜ್ಯ ಒಂದು ಸುಂದರ ರಾಜ್ಯ ಅಲ್ಲಿ ಪರಿಶ್ರಮಿಗಳು ಇದ್ದಾರೆ ಎಂದು ಕೇರಳವನ್ನು ಹೊಗಳಿದರು.

ದೇಶದಾದ್ಯಂತ ಇಂದು ‘ದಿ ಕೇರಳ ಸ್ಟೋರಿ’ ಸಿನಿಮಾ ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಆಗಿದೆ. ಕೇರಳದಲ್ಲಿ ಚಿತ್ರ ಪ್ರದರ್ಶನಕ್ಕೆ ಥಿಯೇಟರ್ ಮಾಲೀಕರು ಹಿಂದೇಟು ಹಾಕಿದ್ದಾರೆ.

Loading

Leave a Reply

Your email address will not be published. Required fields are marked *