ಬೆಂಗಳೂರು: ನಟ ನಾಗಭೂಷಣ್ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮತ್ತೊಂದು ವರದಿ ಸಿಕ್ಕಿದ್ದು, ಆ ವರದಿ ಇದೀಗ ಬಯಲಾಗಿದೆ. ಅಪಘಾತದ ಬಗ್ಗೆ ತಿಳಿಯುವುದಕ್ಕಾಗಿ ನಾಗಭೂಷಣ್ ಚಾಲನೆ ಮಾಡುತ್ತಿದ್ದ ಕಾರಿನ ಐಎಂವಿ ಟೆಸ್ಟ್ ಮಾಡಲು ಆರ್.ಟಿ.ಐ ಅಧಿಕಾರಿಗಳಿಗೆ (R.T.O. Report) ಪೊಲೀಸರು ಸೂಚಿಸಿದ್ದರು. ಅಧಿಕಾರಿಗಳು ಐಎಂವಿ ಟೆಸ್ಟ್ ಮಾಡಿದ್ದು,
ತಮ್ಮ ವರದಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ನಾಗಭೂಷಣ್ ಕಾರು ಅಪಘಾತ ಅತಿಯಾದ ವೇಗದಿಂದ ಆಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಪಘಾತದ ವೇಳೆ ಗಂಟೆಗೆ 50 ರಿಂದ 60 ಕಿಲೋ ಮೀಟರ್ ವೇಗದಲ್ಲಿ ಕಾರು ಚಲಿಸುತ್ತಿತ್ತು ಎಂದು ವರದಿ ಮಾಡಿದ್ದಾರೆ. ಕಾರಿನ ಟಯರ್ ಸ್ಪೀಟ್, ಮೀಟರ್ ಪರಿಶೀಲನೆ ಮಾಡಿ ಇಂಥದ್ದೊಂದು ವರದಿಯನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ನೀಡಲಾಗಿದೆ.