ಬೆಂಗಳೂರು: ವೈಯಕ್ತಿಕವಾಗಿ ಅವರವರು ಹೇಳಿಕೆ ಕೊಡುತ್ತಿರುತ್ತಾರೆ. ಇದು ವರಿಷ್ಠರ ಮಟ್ಟದಲ್ಲಿ ಆಗಿರುವ ನಿರ್ಣಯ. ಹೀಗಿರುವಾಗ ವೈಯಕ್ತಿಕವಾಗಿ ಯಾರೂ ಹೇಳಿಕೆ ಕೊಡಬಾರದು. ಇಂತಹ ಹೇಳಿಕೆಗಳು ಪಕ್ಷ ವಿರೋಧಿಯಾಗುತ್ತದೆ. ವ್ಯತ್ಯಾಸಗಳು ಇದ್ದರೆ ಸಂಬಂಧಿಸಿದ ನಾಯಕರ ಜೊತೆ ಮಾತಾಡಬಾರದು.
ಹಾಗಾಗಬಾರದಿತ್ತು ಹೀಗಾಗಬಾರದಿತ್ತು ಎನ್ನಲು ನಾವು ಪಕ್ಷಕ್ಕಿಂತ ದೊಡ್ಡವರಲ್ಲ. ಪಕ್ಷದಲ್ಲಿ ಜವಾಬ್ದಾರಿಯುತ ವ್ಯಕ್ತಿಗಳು ನಿರ್ಣಯ ತೆಗೆದುಕೊಂಡಾಗ ಸಹಕರಿಸುವುದು ನಮ್ಮ ಕರ್ತವ್ಯ ಎಂದು ಬಿಜೆಪಿ-ಜೆಡಿಎಸ್ ಮೈತ್ರಿಗೆ ಶಾಸಕ ಎಸ್.ಟಿ. ಸೋಮಶೇಖರ್ ಅಪಸ್ವರ ಎತ್ತರಿವ ವಿಚಾರವಾಗಿ ಬಿಜೆಪಿ ಶಾಸಕ ಅಶ್ವತ್ ನಾರಾಯಣ ಪ್ರತಿಕ್ರಿಯಿಸಿದರು.