ಉಕ್ರೇನ್ ದಿನಸಿ ಅಂಗಡಿ ಮೇಲೆ ರಷ್ಯಾ ರಾಕೆಟ್ ದಾಳಿಗೆ 48 ಮಂದಿ ಬಲಿ

ಖಾರ್ಕಿವ್: ಪಶ್ಚಿಮ ಉಕ್ರೇನ್ನ ಖಾರ್ಕಿವ್ ಪ್ರದೇಶದ ದಿನಸಿ ಅಂಗಡಿ ಮೇಲೆ ರಷ್ಯಾ ಸೇನೆ ನಡೆಸಿದ ಭೀಕರ ರಾಕೆಟ್ ದಾಳಿಯಲ್ಲಿ48 ಮಂದಿ ಮೃತಪಟ್ಟಿರುವ ವರದಿಯಾಗಿದೆ.ಜನವಸತಿ ಪ್ರದೇಶಗಳನ್ನು ಟಾರ್ಗೆಟ್ ಮಾಡಿಕೊಂಡು ರಷ್ಯಾ ಸೇನೆ ರಾಕೆಟ್ ದಾಳಿ ನಡೆಸಿದ್ದು, 48 ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಉಕ್ರೇನ್ ಸರಕಾರ ಆರೋಪಿಸಿದೆ.

ರಷ್ಯಾ ದಾಳಿ ಖಂಡಿಸಿರುವ ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ, ”ಪುಟಿನ್ ಸೇನೆ ಅಮಾನವೀಯವಾಗಿ ವರ್ತಿಸುತ್ತಿದೆ. ಉದ್ದೇಶಪೂರ್ವಕವಾಗಿ ಜನ ವಸತಿ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿದೆ. ಸಾಮಾನ್ಯ ದಿನಸಿ ಅಂಗಡಿ ಮೇಲೆ ರಾಕೆಟ್ ದಾಳಿ ನಡೆಸುವ ಮೂಲಕ ಅಮಾಯಕ ನಾಗರಿಕರನ್ನು ಕೊಂದಿದೆ,” ಎಂದು ತಮ್ಮ ಸಾಮಾಜಿಕ ಮಾಧ್ಯಮದಲ್ಲಿನ ಖಾತೆಯಲ್ಲಿಆಕ್ರೋಶ ಹೊರಹಾಕಿದ್ದಾರೆ.

Loading

Leave a Reply

Your email address will not be published. Required fields are marked *