ದೇಶ ಮತ್ತು ಸಮಾಜದ ಅಗತ್ಯತೆಗಳು ಸಂತರ ಆದ್ಯತೆಯಾಗಿವೆ: ಯೋಗಿ ಆದಿತ್ಯನಾಥ್

ಗೋರಕ್ಪುರ : ಸನಾತನ ಧರ್ಮದ ಬಗ್ಗೆ ತಮಿಳುನಾಡಿನ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ದೇಶದಲ್ಲಿ ಹಿಂದೂ ಧರ್ಮದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಇದರ ನಡುವೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಇರುವುದು ಒಂದೇ ಧರ್ಮ ಅದು ಸನಾತನ ಧರ್ಮ, ಉಳಿದವೆಲ್ಲಾ ಪಂಥಗಳು ಹಾಗೂ ಪೂಜಾ ವಿಧಾನಗಳು ಎಂದು ಹೇಳಿದ್ದಾರೆ.

‘ಶ್ರೀಮದ್ ಭಾಗವತ ಕಥಾ ಜ್ಞಾನ ಯಾಗ’ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ ಅವರು, ಸನಾತನ ಧರ್ಮವೊಂದೇ ಧರ್ಮ, ಉಳಿದ ಎಲ್ಲವೂ ಪಂಥ-ಪಂಗಡಗಳು ಮತ್ತು ಆರಾಧನಾ ವಿಧಾನಗಳು ಮಾತ್ರ. ಸನಾತನವು ಮಾನವೀಯತೆಯ ಧರ್ಮವಾಗಿದ್ದು, ಅದರ ಮೇಲೆ ದಾಳಿ ನಡೆದರೆ ಜಗತ್ತಿನಾದ್ಯಂತ ಮಾನವೀಯತೆಯ ಬಿಕ್ಕಟ್ಟು ಸೃಷ್ಟಿಯಾಗಲಿದೆ ಎಂದು ತಿಳಿಸಿದರು. ಈ ವೇಳೆ ಅವರು “ಭಾಗವತ್ ಕಥೆಯು ಅಪರಿಮಿತವಾಗಿದೆ. ಇದು ನಿರ್ದಿಷ್ಟ ದಿನಗಳು ಅಥವಾ ಗಂಟೆಗಳಿಗೆ ಸೀಮಿತವಾಗಿಲ್ಲ. ಇದು ಯಾವುದೇ ಕೊನೆಯಿಲ್ಲದೇ ಹರಿಯುವ ಜ್ಞಾನ, ಭಕ್ತರು ತಮ್ಮ ಜೀವನದಲ್ಲಿ ಭಾಗವತ್ ಕಥೆಯ ಸಾರವನ್ನು ನಿರಂತರವಾಗಿ ಅನುಭವಿಸುತ್ತಾರೆ ಎಂದರು.

Loading

Leave a Reply

Your email address will not be published. Required fields are marked *