ಮೈಸೂರು: ವಾಹನಗಳ ತಪಾಸಣೆ ವೇಳೆ ಮೈಸೂರಿನ ಸಂಚಾರಿ ಪೊಲೀಸರ ಯಡವಟ್ಟು ಮಾಡಿದ್ದಾರೆ. ಬೈಕ್ ಗೆ ಅಡ್ಡವಾಗಿ ಬ್ಯಾರಿಕೇಡ್ ಎಳೆದಿದ್ದರಿಂದ ಯುವತಿ ಕೆಳಕ್ಕೆ ಬಿದ್ದಿದ್ದು, ಅದೇ ಸಮಯಕ್ಕೆ ದಿಡೀರನೆ ಬಂದ ಟಿಪ್ಪರ್ ಲಾರಿ ಯುವತಿಯ ಕೈ ಸಿಲುಕಿಗೆ ತೀವ್ರ ಗಾಯಗಳಾಗಿವೆ. ಸಂಚಾರಿ ಪೊಲೀಸರ ದುರ್ವರ್ತನೆ ವಿರುದ್ದ ಸಾರ್ವಜನಿಕರು ತಿರುಗಿಬಿದ್ದು ಗಲಾಟೆ ಮಾಡಿದರು.
ಮೈಸೂರು-ನಂಜನಗೂಡು ರಸ್ತೆಯ ಬಂಡೀಪಾಳ್ಯ ರಿಂಗ್ ರೋಡ್ ಜಂಕ್ಷನ್ ಬಳಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಬಂದ ಲಕ್ಷ್ಮೀಪುರಂ ಸಂಚಾರಿ ಪಿಐ ಹಾಗೂ ಪಿ.ಎಸ್.ಐಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರು ಗಲಾಟೆ ಹೆಚ್ಚಾದ ಬಳಿಕ ಪೊಲೀಸರು ಯುವತಿಯನ್ನು ಅಸ್ಪತ್ರೆಗೆ ದಾಖಲಿಸಿದರು.