ಸಾಮಾನ್ಯವಾಗಿ ಉಗುರುಗಳಲ್ಲಿ ಕೊಳೆ ಸಂಗ್ರಹವಾಗಿರುತ್ತದೆ. ಮಕ್ಕಳು ಆ ಉಗುರುಗಳನ್ನು ಬಾಯಿಯಿಂದ ಕಚ್ಚಿದರೆ, ಹೊಟ್ಟೆಯೊಳಗೆ ರೋಗಾಣುಗಳು ಹೋಗುವುದರಿಂದ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಉಗುರು ಕಚ್ಚುವ ಸಮಯದಲ್ಲಿ ಉಗುರಿನ ಅಕ್ಕಪಕ್ಕದ ಚರ್ಮಕ್ಕೂ ಹಾನಿಯಾಗುವ ಸಾಧ್ಯತೆ ಇರುತ್ತದೆ.
ಉಗುರು ಗಟ್ಟಿ ಇರುವುದರಿಂದ ಇದು ಹಲ್ಲುಗಳ ಮೇಲೆ ಒತ್ತಡ ಬೀಳುತ್ತದೆ. ಪ್ರತಿದಿನವೂ ಈ ಅಭ್ಯಾಸ ಮುಂದುವರೆದರೆ ಹಲ್ಲುಗಳ ಭಾಗ ದುರ್ಬಲವಾಗುತ್ತದೆ. ಉಗುರು ಕಚ್ಚುವುದರಿಂದ ಅದರಲ್ಲಿರುವ ಬ್ಯಾಕ್ಟೀರಿಯಾ ದೇಹದೊಳಗೆ ಸೇರಿಕೊಳ್ಳುತ್ತದೆ. ಈ ಬ್ಯಾಕ್ಟೀರಿಯಾಗಳು ಜೀರ್ಣ ಕ್ರಿಯೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದ ಹೊಟ್ಟೆನೋವು, ಮಲಬದ್ಧತೆ, ಆಸಿಡಿಟಿಯಂತಹ ಉದರ ಸಂಬಂಧಿ ಸಮಸ್ಯೆಗಳು ಉಲ್ಬಣವಾಗುತ್ತದೆ.
ಒಂದು ವೇಳೆ ನಿಮ್ಮ ಮಕ್ಕಳಿಗೆ ಉಗುರು ಕಚ್ಚುವ ಅಭ್ಯಾಸ ಇದ್ದರೆ, ಉಗುರು ಕಚ್ಚುವುದನ್ನು ತಡೆಯಲು ಕೈಗಳಿಗೆ ಹಾನಿಕಾರಕವಲ್ಲದ ಯಾವುದೇ ಕಹಿ ಪದಾರ್ಥವನ್ನು ಹೆಚ್ಚಿ. ಅದು ಬೇವಿನ ರಸವಾಗಿರಬಹುದು ಅಥವಾ ಹಾಗಲಕಾಯಿ ರಸವಾಗಿರಬಹುದು. ಆಗ ಮಕ್ಕಳಿಗೆ ಕಹಿ ಅನುಭವ ಆಗಿ ಕ್ರಮೇಣ ಉಗುರು ಕಚ್ಚುವ ಅಭ್ಯಾಸವನ್ನು ಬಿಡುವ ಸಾಧ್ಯತೆ ಇದೆ. ಮಕ್ಕಳ ಉಗುರುಗಳನ್ನು ನಿಯಮಿತವಾಗಿ ಟ್ರಿಮ್ ಮಾಡಿ. ಉಗುರುಗಳು ಬೆಳೆಯದಿದ್ದಾಗ ಅವುಗಳನ್ನು ಕಚ್ಚುವ ಅಭ್ಯಾಸವು ತನ್ನಿಂದ ತಾನೇ ಕಡಿಮೆಯಾಗುತ್ತದೆ.
ಮಗು ತನ್ನ ಉಗುರುಗಳನ್ನು ಹಲ್ಲುಗಳಿಂದ ಕಚ್ಚುತ್ತಿದೆ ಎಂದು ತಿಳಿದ ಕೂಡಲೇ ಅವರ ಗಮನವನ್ನು ಬೇರೆಡೆಗೆ ವರ್ಗಾಯಿಸಲು ಪ್ರಯತ್ನಿಸಿ. ಉಗುರು ಕಚ್ಚುವಿಕೆಯನ್ನು ಪ್ರಚೋದಿಸುವ ಎಲ್ಲಾ ಪ್ರಚೋದಕಗಳಿಂದ ಮಕ್ಕಳನ್ನು ದೂರವಿಟ್ಟರೆ ಸೂಕ್ತ. ಆದರೆ ಯಾವುದೇ ಕಾರಣಕ್ಕೂ ಮಕ್ಕಳನ್ನು ಹೊಡೆದು, ಬೆದರಿಸಿ ಉಗುರು ಕಚ್ಚುವ ಅಭ್ಯಾಸ ಬಿಡುವಂತೆ ಬಲವಂತ ಮಾಡಬೇಡಿ. ಉಗುರುಗಳಿಗೆ ಆಗ್ಗಾಗ್ಗೆ ನೈಲ್ ಪಾಲಿಶ್ ಹಚ್ಚಿಕೊಳ್ಳಿ. ಗ್ಲೌಸ್ ಧರಿಸುವುದರಿಂದ ಕೂಡಾ ನೀವು ಈ ಅಭ್ಯಾಸವನ್ನು ತಪ್ಪಿಸಬಹುದು. ನಿಮ್ಮ ಗಮನವನ್ನು ಬೇರೆ ಹವ್ಯಾಸಗಳತ್ತ ರೂಢಿಸಿಕೊಳ್ಳಿ