ಬೆಂಗಳೂರು: ಸುಮಲತಾ ಭೇಟಿಗೆ ಸಿಗುವ ಮೋದಿ ನಮಗೇಕೆ ಸಿಗಲ್ಲ ಎಂದು ಚಲುವರಾಯ ಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಳೆದ ಸೆಪ್ಟೆಂಬರ್ 19ರಂದು ಸುಮಲತಾ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದನ್ನು ಉಲ್ಲೇಖಿಸಿ ನಮಗೇಕೆ ಮೋದಿ ಸಿಗುವುದಿಲ್ಲ ಎಂದು ಕೇಳಿದ್ದಾರೆ.
ನಾವು ಎರಡು ದಿನಗಳಿಂದ ಪ್ರಧಾನಿ ಭೇಟಿಗೆ ಕಾಲಾವಕಾಶ ಕೇಳಿದ್ದೇವೆ. ನಮಗೆ ಭೇಟಿಗೆ ಕಾಲಾವಕಾಶ ಸಿಕ್ಕಿಲ್ಲ. ಸಂಸದೆ ಸುಮಲತಾ ಅವರು ಪ್ರಧಾನಿ ಜೊತೆ ಫೋಟೊಗೆ ಪೋಸ್ ಕೊಡೋಕೆ ಹೋಗಿದ್ರಾ ಎಂದು ಪ್ರಶ್ನಿಸಿದರು. ʻʻನಾವು ಸಂಸದರು, ಕೇಂದ್ರ ಸಚಿವರ ಮೂಲಕವೂ ಹೇಳಿಸಿದೆವು. ಆದರೂ ಪ್ರಧಾನಿ ಭೇಟಿಗೆ ಅವಕಾಶ ನೀಡಿಲ್ಲ. ಸುಮಲತಾಗೆ ಅವಕಾಶ ಕೊಟ್ಟಿದ್ರು ಯಾಕಂತೆ? ಸುಮಲತಾ ಅವರು ನಮಗೂ ಒಂದು ಅವಕಾಶ ಕೊಡಿಸಬಹುದಿತಲ್ವ? ಅವರು ಮೋದಿ ಅವರ ಜತೆ ಏನು ಚರ್ಚೆ ಮಾಡಿದ್ರಂತೆ ಎಂಬುದನ್ನು ಅವರನ್ನೇ ಕೇಳಿʼʼ ಎಂದು ಟಾಂಗ್ ಕೊಟ್ಟರು